ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣ ಹೊಂದಿರುವುದನ್ನು ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಧ್ರುವ್ ಪಾಟೀಲ್ ಸಫಾರಿಗೆ ತೆರಳಿದ್ದ ವೇಳೆ ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುವ ಚಿತ್ರ ಸೆರೆ ಹಿಡಿದಿದ್ದರು. ಅದರ ಎರಡು ಕಣ್ಣುಗಳು ಕೂಡ ಬೇರೆ ಬಣ್ಣದ್ದಾಗಿದೆ. ಚಿರತೆಯ ಎಡಗಣ್ಣು ಕಂದು ಬಣ್ಣ ಹಾಗೂ ಬಲಗಣ್ಣು ನೀಲಿ ಹಸಿರಿನಿಂದ ಕೂಡಿದೆ. ಕಣ್ಣುಗಳ ಬಣ್ಣಕ್ಕೆ ಹೆಟ್ರೋಕ್ರೊಮಿಯಾ ಎಂಬುದು ಕಾರಣವಾಗಿದ್ದು, ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳು ಹೊಂದಿರುವ ಚಿರತೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಬಂಡೀಪುರದಲ್ಲಿ ಅಪರೂಪದ, ವಿಶೇಷವಾದ, ವಿಭಿನ್ನವಾದ ಚಿರತೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಚಿತ್ರ ನೋಡಿ ವನ್ಯಜೀವಿ ಪ್ರೇಮಿಗಳು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.