ADVERTISEMENT

ಯಳಂದೂರು: ರೈತರಿಗೆ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಮೇ 2024, 14:23 IST
Last Updated 23 ಮೇ 2024, 14:23 IST

ಯಳಂದೂರು: ತಾಲ್ಲೂಕಿನ ದುಗ್ಗಹಟ್ಟಿ ರಾಜೇಶ್ ಅವರ ತೋಟದ ಮನೆಯಲ್ಲಿ ಕೊಳ್ಳೇಗಾಲ ಜಿಎಸ್ಬಿ ಪ್ರತಿಷ್ಠಾನ ಮೇ. 28ರಿಂದ 30 ರವರೆಗೆ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಿದೆ.

ಮಣ್ಣಿನ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶ ಕೊರತೆ, ಸೂಕ್ಷ್ಮ ಜೀವಾಣುಗಳ ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ತೋಟಗಳ ಸಮಗ್ರ ಅಧ್ಯಯನದ ಬಗ್ಗೆ ಪ್ರಾತ್ಯಕ್ಷಿಕೆ ಇರಲಿದೆ. ಸಹಜ ಕೃಷಿ ವಿಜ್ಞಾನಿ ತುಮಕೂರು ಎಚ್.ಮಂಜುನಾಥ ಹಾಗೂ ಅನುಭವಿ ಕೃಷಿಕರು ಭಾಗವಹಿಸಲಿದ್ದಾರೆ. ಮೇ.26ರೊಳಗೆ ನೋಂದಣಿಗೆ ಅವಕಾಶ ಇದೆ ಎಂದು ಜಿಎಸ್ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT