ADVERTISEMENT

ಗಾಳಿಯ ಗುಣಮಟ್ಟ: ಚಾಮರಾಜನಗರಕ್ಕೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 16:38 IST
Last Updated 18 ಫೆಬ್ರುವರಿ 2022, 16:38 IST
ಚಾಮರಾಜನಗರದಲ್ಲಿ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಅಳವಡಿಸಿರುವ ವಾಯುಮಾಲಿನ್ಯ ಪ್ರಮಾಣ ಪ್ರದರ್ಶಿಸುವ ಫಲಕ
ಚಾಮರಾಜನಗರದಲ್ಲಿ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಅಳವಡಿಸಿರುವ ವಾಯುಮಾಲಿನ್ಯ ಪ್ರಮಾಣ ಪ್ರದರ್ಶಿಸುವ ಫಲಕ   

ಚಾಮರಾಜನಗರ: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಶುಕ್ರವಾರ ಚಾಮರಾಜನಗರ ಮೊದಲ ಸ್ಥಾನದಲ್ಲಿತ್ತು.

ಸೂಚ್ಯಂಕದಲ್ಲಿ 132 ನಗರಗಳನ್ನು ಪಟ್ಟಿ ಮಾಡಲಾಗಿದ್ದು, ವಾಯುಮಾಲಿನ್ಯದ ಪ್ರಮಾಣಕ್ಕೆ ಅನುಸಾರವಾಗಿ ನಗರಗಳ ಸ್ಥಾನ ಬದಲಾಗುತ್ತಿರುತ್ತದೆ. ಚಾಮರಾಜನಗರವು ಗುರುವಾರ ಎರಡನೇ ಸ್ಥಾನದಲ್ಲಿತ್ತು. ಶುಕ್ರವಾರ ಮೊದಲ ಸ್ಥಾನಕ್ಕೆ ಬಂದಿದೆ. ನಗರದ ಗಾಳಿಯ ಗುಣಮಟ್ಟ ಸೂಚ್ಯಂಕದ ಮೌಲ್ಯ (ಎಕ್ಯುಐ ವಾಲ್ಯು) 36 ಇದೆ.

39 ಎಕ್ಯುಐ ವಾಲ್ಯು ಪಡೆದಿರುವ ತಮಿಳುನಾಡಿನ ತೂತ್ತುಕುಡಿ ಎರಡನೇ ಸ್ಥಾನದಲ್ಲಿದೆ. 46 ಎಕ್ಯುಐ ವಾಲ್ಯುಹೊಂದಿರುವ ರಾಜ್ಯದ ವಿಜಯಪುರ ಮೂರು, 50ಎಕ್ಯುಐ ವಾಲ್ಯು ಗಳಿಸಿರುವ ಬಾಗಲಕೋಟೆ ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಮಾಪಕ ಅಳವಡಿಸಿದ್ದು, ಅದರ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತದೆ.ಎಕ್ಯುಐ ವಾಲ್ಯು 50ರ ಒಳಗಡೆ ಇದ್ದರೆ ಗಾಳಿಯ ಗುಣಮಟ್ಟ ಉತ್ತಮ, 51ರಿಂದ 100ರೊಳಗಿದ್ದರೆ ತೃಪ್ತಿದಾಯಕ, 101ರಿಂದ 200ರವರೆಗೆ ಮಧ್ಯಮ, 201–300 ಅಂಕಗಳಿದ್ದರೆ ಕಳಪೆ, 301ರಿಂದ 400 ತೀರಾ ಕಳಪೆ ಎಂದು ಗುರುತಿಸಲಾಗಿದೆ.

ಶುಕ್ರವಾರ ರಾಜಧಾನಿ ಬೆಂಗಳೂರಿನ ಎಕ್ಯುಐ ವಾಲ್ಯು 97 ಇತ್ತು.

ನಗರದಲ್ಲಿ ಕೈಗಾರಿಕಾ ಚಟುವಟಿಕೆ ಇಲ್ಲದಿರುವುದರಿಂದ ವಾಯುಮಾಲಿನ್ಯ ಪ್ರಮಾಣ ಕಡಿಮೆ ಎಂದು ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.