ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬೇಗೂರು, ತೆರಕಣಾಂಬಿಯಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಯಿಂದ ಸೋಮವಾರ ಬಕ್ರೀದ್ ಆಚರಣೆ ಮಾಡಿದರು.
ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಬೆಳಿಗ್ಗೆ ನೂರಾರು ಮಂದಿ ಮುಸ್ಲಿಂ ಸಮುದಾಯದ ಮುಖಂಡರು ಹೊಸ ಬಟ್ಟೆ ಉಡುಪಿನೊಂದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಸ್ಲಿಂ ಧರ್ಮ ಗುರುಗಳು ಪ್ರವಚನ ಬೋಧಿಸಿದರು. ನಂತರ ಸಮುದಾಯದವರು ಒಬ್ಬರಿಗೊಬ್ಬರು ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಮಕ್ಕಳು ಸಹ ಪ್ರಾರ್ಥನೆಯಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಕ್ಕು ಮೊದಲು ಪಟ್ಟಣದ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು.
ಜಾಮಿಯಾ ಮಸೀದಿಯ ಧರ್ಮ ಗುರು ಜಾಬೀರ್ ಹಾಗೂ ಲಬ್ಬೆ ಮಸೀದಿಯ ಧರ್ಮ ಗುರು ಕರೀಂ ಮಾತನಾಡಿ, ಮೆಕ್ಕಾ, ಮದೀನದ ರೀತಿ ಹಲವು ವರ್ಷಗಳಿಂದ ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬಕ್ರೀದ್ ಆಚರಣೆ ಮಾಡಲಾಗುತ್ತಿದೆ ಎಂದರು.
ಪುಸರಭೆ ಸದಸ್ಯ ಮಹಮ್ಮದ್ ಇಲಿಯಾಸ್, ಮುಖಂಡರಾದ ಸಯ್ಯದ್ ದಸ್ತಗೀರ್, ಜಾಮಿಯಾ ಮಸೀದಿಯ ಅಧ್ಯಕ್ಷ ಸರ್ದಾರ್, ಲಬ್ಬೆ ಮಸೀದಿಯ ಅಧ್ಯಕ್ಷ ಫಾರುಕ್, ಸದಸ್ಯರಾದ ಮೈದೀನ್, ಆರಿಫ್, ಅಮೀನ್, ಸಾಹುಲ್ ಹಮಿದ್, ಸೋಹೆಲ್ ಪಾಷಾ, ಮುಸ್ತಾಫ್, ಅಬ್ದುಲ್ ಮಾಲೀಕ್ ಹಾಜರಿದ್ದರು. ಗುಂಡ್ಲುಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.
ಬೇಗೂರಿನಲ್ಲಿ ಬಕ್ರೀದ್ ಆಚರಣೆ: ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಮವರು ಬಕ್ರೀದ್ ಆಚರಣೆ ಮಾಡಿದರು.
ಧರ್ಮ ಗುರುಗಳಾದ ಮಹಮ್ಮದ್ ಅಸ್ಲಾಂ ಖಾನ್ ಬಕ್ರೀದ್ ಆಚರಣೆಯ ಮಹತ್ವವನ್ನು ಸಾರಿ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಮಸೀದಿ ಅಧ್ಯಕ್ಷ ಬಾಬು, ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್, ಮೊಹಮ್ಮದ್ ಇಲಿಯಾಸ್, ಕಾರ್ಯದರ್ಶಿ ರಿಯಾಜ್ ಪಾಷ, ಸದಸ್ಯರಾದ ನಿಸಾರ್ ಅಹಮದ್, ಅಬ್ದುಲ್ ಖಾದರ್, ಮೊಹಮ್ಮದ್ ಪಾಷ, ಹಬೀಬಿ ಉಲ್ಲಾ, ಇಶ್ರೀಫ್ ಬೇಗ್, ಫೈರಸ್ ಖಾನ್, ಮುಬಾರಕ್, ಮುಖಂಡರಾದ ಮೊಹಮ್ಮದ್ ಜಿಕ್ರಿಯ, ಇಮ್ರಾನ್ ಖಾನ್, ನಯಾಜ್, ನವೀದ್ ನೂರು ಮೊಹಮ್ಮದ್, ಆಸಿಫ್, ಅಲ್ತಾಫ್, ಅಕ್ಬರ್ ಖಾನ್, ಇಸ್ಮಾಯಿಲ್ ಖಾನ್, ಯೂಸುಫ್, ಸಲ್ಮಾನ್ ಹಾಜರಿದ್ದರು. ಬೇಗೂರು ಠಾಣೆಯ ಎಸ್‌ಐ ಚರಣ್‍ಗೌಡ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.