ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮ ಮಗುವಿನಹಳ್ಳಿಯಲ್ಲಿ ಕಾಡಾನೆಗಳ ದಾಳಿಗೆ ಬಾಳೆ ಫಸಲು ಹಾಳಾಗಿದೆ. ಗ್ರಾಮದ ಕೆಂಪೇಗೌಡ ಮತ್ತು ದಯಾಳ್ ಅವರ ಜಮೀನಿಗೆ ಮೂರ್ನಾಲ್ಕು ದಿನಗಳಿಂದ ರಾತ್ರಿ ಸಮಯದಲ್ಲಿ ಸತತವಾಗಿ ದಾಳಿ ಮಾಡಿ ಬಾಳೆ ಗಿಡ ಮತ್ತು ಗೊನೆಗಳನ್ನು ನಾಶ ಮಾಡಿವೆ.
ಆನೆಗಳು ಬಂದಿದೆ ಎಂದು ಇಲಾಖೆಯ ಸಿಬ್ಬಂದಿಗೆ ತಿಳಿಸಿದರೂ ಸ್ಪಂದಿಸಿಲ್ಲ. ಇದರಿಂದಾಗಿ ಕಟಾವಿಗೆ ಬಂದಿರುವ ಬೆಳೆ ಆನೆ ಪಾಲಾಗುತ್ತಿದೆ. ಆನೆಗಳಿಗೆ ಶೀಘ್ರವಾಗಿ ಕಡಿವಾಣ ಹಾಕದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.