ಕೊಳ್ಳೇಗಾಲ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಿತು.
ಲಕ್ಷ್ಮೀ ನಾರಾಯಣ್ವಾಮಿ, ಗರುಡಕಂಬ ಆಂಜನೇಯ, ಗಣಪತಿ ಮೂರ್ತಿಗಳಿಗೆ ಸುಮಾರು 25 ಕೆ.ಜಿ.ಯಷ್ಟು ಬೆಣ್ಣೆ ಅಲಂಕಾರ ಮಾಡಿ ಸೌಮ್ಯನಾಯಕಿ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಯಿತು.
ಇಂದು ಮುಂಜಾನೆ 4:30ರ ಸಮಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ ನಡೆಸಿ ಬೆಣ್ಣೆ ಅಲಂಕಾರ ಮಾಡಲಾಯಿತು. ಹಾಗೂ ಧನುರ್ಮಾಸದ ಸಮಾಪ್ತಿ ದೇವರಿಗೆ ಸಕ್ಕರೆ ಪೊಂಗಲ್ ನೈವೇದ್ಯ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಸಂಜೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಮಕರ ಮಾಸ ಪ್ರಾರಂಭವಾದ ದಿನವಾದ ಇಂದು ಉತ್ತರ ದ್ವಾರ(ಸ್ವರ್ಗದ ಬಾಗಿಲು)ನ್ನು ತೆರೆದು ಅಲ್ಲಿಂದ ಉತ್ಸವ ಮೂರ್ತಿ ಹೊರಬಂದು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇಂದಿನ ಎಲ್ಲಾ ಪೂಜಾ ಕೈಕರ್ಯಗಳನ್ನು ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಸುದರ್ಶನ ಭಟ್ ನೆರವೇರಿಸಿದರು. ಹಾಗೂ ದೇವಸ್ಥಾನದ ಆಡಳಿತವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.