ADVERTISEMENT

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ: ಲಿವರ್, ಕಿಡ್ನಿ, ಕಣ್ಣು, ಚರ್ಮ ದಾನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 7:24 IST
Last Updated 31 ಜುಲೈ 2023, 7:24 IST
ಎಚ್.ಆರ್.ರಾಕೇಶ್
ಎಚ್.ಆರ್.ರಾಕೇಶ್   

ಗುಂಡ್ಲುಪೇಟೆ: ಪಟ್ಟಣದ 18ನೇ ವಾರ್ಡ್ ನಿವಾಸಿ ಎಚ್.ಆರ್.ರಾಕೇಶ್ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ರಾಜು ಮತ್ತು ಸುಮಂಗಲ ದಂಪತಿ ಪುತ್ರ ಎಚ್.ಆರ್.ರಾಕೇಶ್‍ಗೆ ದಿಢೀರ್ ಬ್ರೈನ್ ಸ್ಟ್ರೋಕ್ ಆದ ಹಿನ್ನೆಲೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಎರಡು ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದರು. ನಂತರ ಪೋಷಕರು ಪುತ್ರನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು.

ಮೈಸೂರಿನ ಅಪೊಲೋ ಆಸ್ಪತ್ರೆಗೆ ರಾಕೇಶ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಶ ನಾಶಗಳು, ಪಿತ್ತಕೋಂಶ(ಲಿವರ್), ಮೂತ್ರಪಿಂಡ(ಕಿಡ್ನಿ), ಕಣ್ಣು, ಚರ್ಮ(ಸ್ಕಿನ್) ದಾನ ಮಾಡಿದ್ದಾರೆ.

ADVERTISEMENT

ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ: ಆಸ್ಪತ್ರೆಗೆ ದಾಖಲಾದ ವೇಳೆ ಶಸ್ತ್ರಚಿಕಿತ್ಸೆಗೆ ಐದು ಲಕ್ಷ ಹಣದ ಅವಶ್ಯಕತೆ ಇರುವುದನ್ನು ಮನಗಂಡ ತಾಲ್ಲೂಕಿನ ದಾನಿಗಳು ರಾಕೇಶ್ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಆದರೆ, ರಾಕೇಶ್ ಸಾವಿನಿಂದ ಹಲವು ದುಃಖಿತರಾಗಿದ್ದರು.

ಮೃತದೇಹವನ್ನು ಮೈಸೂರಿನಿಂದ ಆ್ಯಂಬುಲೆನ್ಸ್ ಮೂಲಕ ಗುಂಡ್ಲುಪೇಟೆಗೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರು ಹಾಗು ಸಾವಿರಾರು ಮಂದಿ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.