ADVERTISEMENT

ಚಾಮರಾಜನಗರ: 750 ಗ್ರಾಂನ ಥೈರಾಯ್ಡ್‌ ಗೆಡ್ಡೆ ತೆಗೆದ ಸಿಮ್ಸ್‌ ವೈದ್ಯರು

ಕೊಳ್ಳೇಗಾಲದ ಆರೋಗ್ಯಮೇಳದಲ್ಲಿ ಭಾಗವಹಿಸಿದ್ದ ಮಹದೇಶ್ವರ ಬೆಟ್ಟದ ಮಹಿಳೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 5:24 IST
Last Updated 9 ಫೆಬ್ರುವರಿ 2024, 5:24 IST
ಮಹಿಳೆಯ ಕತ್ತಿನಲ್ಲಿದ್ದ ಗೆಡ್ಡೆ
ಮಹಿಳೆಯ ಕತ್ತಿನಲ್ಲಿದ್ದ ಗೆಡ್ಡೆ   

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ವೈದ್ಯರು ಗುರುವಾರ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಮಹಿಳೆಯೊಬ್ಬರ ಕುತ್ತಿಗೆಯಲ್ಲಿ ಬೆಳೆದಿದ್ದ ಥೈರಾಯ್ಡ್‌ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ.

ಗೆಡ್ಡೆ 750 ಗ್ರಾಂ ತೂಕ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಮಹಿಳೆಯು ಜ.29ರಂದು ಕೊಳ್ಳೇಗಾಲದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲಿ ಪರೀಕ್ಷಿಸಿದ್ದ ವೈದ್ಯರು, ಸರ್ಜರಿಗೆ ಸಲಹೆ ನೀಡಿದ್ದರು.

ಸಿಮ್ಸ್‌ ಬೋಧನಾ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಗುರುವಾರ ಶಸ್ತ್ರಕ್ರಿಯೆ ನಡೆಸಲಾಗಿದೆ.

ADVERTISEMENT

‘ಸರ್ಜರಿ ವಿಭಾಗದ ಡಾ.ಶಶಿಧರ್‌ ಮತ್ತು ಅರಿವಳಿಕೆ ತಜ್ಞ ಡಾ.ದರ್ಶನ್‌ ಅವರ ತಂಡ ಯಶಸ್ವಿಯಾಗಿ ಗೆಡ್ಡೆಯನ್ನು ತೆಗೆದಿದೆ’ ಎಂದು ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.