ADVERTISEMENT

ದರ್ಶನ್ ಕೃತ್ಯ ಮನುಷ್ಯ ಕುಲಕ್ಕೆ ಅವಮಾನ: ಲೋಕೇಶ್

ಜಾಗತಿಕ ಲಿಂಗಾಯತ ಮಹಾಸಭಾ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:59 IST
Last Updated 19 ಜೂನ್ 2024, 13:59 IST
ಕೊಳ್ಳೇಗಾಲ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬುಧವಾರ ಪ್ರತಿಭಟನೆ ನಡೆಯಿತು.
ಕೊಳ್ಳೇಗಾಲ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬುಧವಾರ ಪ್ರತಿಭಟನೆ ನಡೆಯಿತು.   

ಕೊಳ್ಳೇಗಾಲ: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬುಧವಾರ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣದ  ಬಳಿ ಪ್ರತಿಭಟನಾಕಾರರು ಸಮಾವೇಶಗೊಂಡು ಬಳಿಕ  ವಿವಿಧ ರಸ್ತೆ ಮೂಲಕ ಮೆರವಣಿಗೆ ನಡೆಸಿದರು.   ಎಡಿಬಿ ವೃತ್ತ ಹಾಗೂ ಮಸೀದಿ ವೃತ್ತದ ಬಳಿ ಮಾನವ ಸರಪಳಿ ರಚಿಸಿದರು.  ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಂಜುಳಾ ಅವರಿಗೆ ಮನವಿ ಸಲ್ಲಿಸಿದರು.

ಗಲ್ಲು ಶಿಕ್ಷೆ ವಿಧಿಸಿ: ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಮಾತನಾಡಿ, ‘ನಟ ದರ್ಶನ್  ಮಾಡಿದ ಕೃತ್ಯ ಮನುಷ್ಯ ಕುಲಕ್ಕೆ ಅವಮಾನ. ಈ  ಇಂಥವರು ಯಾವುದೇ ಚಿತ್ರಗಳನ್ನು ಸಹ ಮಾಡಬಾರದು. ಚಿತ್ರದುರ್ಗದ  ರೇಣುಕ ಸ್ವಾಮಿ  ಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ.  ಸ್ವಾಮಿ ಯಾವುದೇ ಜಾತಿ ಆಗಿರಲಿ, ಅವರ ಆತ್ಮಕ್ಕೆ ಶಾಂತಿ ಸಿಗಬೇಕು,  ಅವರ ಕುಟುಂಬಕ್ಕೆ ಸರ್ಕಾರ  ಪರಿಹಾರ ನೀಡಬೇಕು.  ಕೃತ್ಯದಲ್ಲಿ  ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಆಗಬೇಕು.     ದರ್ಶನ್ ಹಾಗೂ ಪವಿತ್ರ ಗೌಡ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದರು.

ADVERTISEMENT

ಪ್ರತಿಭಟನೆಯಲ್ಲಿ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲಾಪುರ ನಂದೀಶ್, ಮಲ್ಲಿಕಾರ್ಜುನಸ್ವಾಮಿ ಜಿನಕನಹಳ್ಳಿ, ಮಹೇಶ್ ಉಗನಿಯ, ಶಿವಸ್ವಾಮಿ ಕಾಮಗೆರೆ, ಪಾಳ್ಯ ರಘು, ಟಗರಪುರ ಮಹದೆವಸ್ವಾಮಿ, ಆಲಹಳ್ಳಿ ಪುಟ್ಟಪ್ಪ, ಕುಂತೂರು ನಂಜುಂಡಸ್ವಾಮಿ, ತಿಮ್ಮರಾಜೀಪುರ ಪುಟ್ಟಣ, ಷಣ್ಮುಖಸ್ವಾಮಿ, ಮಾರ್ಕೆಟ್ ನಂಜಪ್ಪ, ವೀರಭದ್ರಸ್ವಾಮಿ, ಬಸಪ್ನದೊಡ್ಡಿ ಬಸವರಾಜು, ಅಣಗಳ್ಳಿ ಬಸವರಾಜು, ರಾಮಕೃಷ್ಣ, ಸೋಮಣ್ಣ ಉಪ್ಪಾರ್, ನರಸಿಂಹ, ರಮೇಶ್, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಬೂದಿತಿಟ್ಟು ಶಿವಕುಮಾರ್, ಬಸವರಾಜಪ್ಪ ಭಾಗವಹಿಸಿದ್ದರು.

ಕೊಳ್ಳೇಗಾಲ ಎಡಿಬಿ ವೃತ್ತ ಹಾಗೂ ಮಸೀದಿ ವೃತ್ತದ ಬಳಿ ಮಾನವ ಸರಪಳಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.