ADVERTISEMENT

ಸಂತೇಮರಹಳ್ಳಿ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 14:32 IST
Last Updated 17 ನವೆಂಬರ್ 2024, 14:32 IST
ಸಂತೇಮರಹಳ್ಳಿಯ ಮಹದೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಇಶಾ ಪೌಂಡೇಶನ್‌ನಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಸಂತೇಮರಹಳ್ಳಿಯ ಮಹದೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಇಶಾ ಪೌಂಡೇಶನ್‌ನಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಿತು.   

ಸಂತೇಮರಹಳ್ಳಿ: ಇಲ್ಲಿನ ಮಹದೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಇಶಾ ಪೌಂಡೇಶನ್ ಗ್ರಾಮೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಭಾನುವಾರ ನಡೆಯಿತು.

ಪಿಎಸ್‌ಐ ಟಿ.ಎಂ.ತಾಜುದ್ದೀನ್ ವಾಲಿಬಾಲ್ ಚಾಲನೆ ನೀಡಿ ಮಾತನಾಡಿ, ಪಟ್ಟಣ ಪ್ರದೇಶಗಳಲ್ಲಿ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿದ್ದು, ಗ್ರಾಮೀಣ ಭಾಗಗಳಲ್ಲೂ  ಆಯೋಜಿಸುವ ಮೂಲಕ ಕ್ರೀಡೆಯ ಮಹತ್ವವನ್ನು ತಿಳಿಸಿದಂತಾಗುತ್ತದೆ. ಆಯೋಜಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮತ್ತೇ ಜೀವ ತುಂಬಬೇಕಾಗಿದೆ ಎಂದರು.

 ವಿದ್ಯಾರ್ಥಿಗಳು ಸಾಯಂಕಾಲ  ಮೊಬೈಲ್ ಮತ್ತು ಟಿವಿ ನೋಡುವುದನ್ನು ಬಿಟ್ಟು ಕ್ರೀಡೆಗಳಗಳಲ್ಲಿ ಭಾಗವಹಿಸುವುದರಿಂದ ಉತ್ತಮ ತರಬೇತಿ ಸಿಗುತ್ತದೆ. ಪ್ರಶಸ್ತಿಗಳನ್ನು ಗೆಲ್ಲಲು ಸಹಕಾರಿಯಾಗುತ್ತದೆ.   ಮಾನಸಿಕ ನೆಮ್ಮದಿ ಹಾಗೂ ಉತ್ತಮ ದೇಹದಾರ್ಡ್ಯ ಬೆಳೆಸಿಕೊಂಡು, ಸದೃಡವಾದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಪ್ರಕಾಶ್, ನವೀನ್, ಪ್ರಭು, ಶಿವಕುಮಾರ್, ಮಹೇಶ್, ಮಹೇಶ್ ಕುಮಾರ್, ಮನೋರಂಜನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.