ಚಾಮರಾಜನಗರ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ರಾಜ್ಯದ ಎಲ್ಲ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಮತ್ತು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಸೀಮಾ/ಗಡಿ ನಿರ್ಣಯಿಸಿ, ಕರಡು ಪ್ರಸ್ತಾವ ಹೊರಡಿಸಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ವೆಬ್‌ಸೈಟ್‌ನಲ್ಲಿ ಮತ್ತು ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಐದು ತಾಲ್ಲೂಕುಗಳಲ್ಲಿ 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ 23 ಕ್ಷೇತ್ರಗಳಿದ್ದವು.
ಚಾಮರಾಜನಗರ ತಾಲ್ಲೂಕಿನಲ್ಲಿ ಒಂಬತ್ತು, ಹನೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ತಲಾ ಆರು ಕ್ಷೇತ್ರಗಳು, ಕೊಳ್ಳೇಗಾಲದಲ್ಲಿ ನಾಲ್ಕು ಮತ್ತು ಯಳಂದೂರು ತಾಲ್ಲೂಕಿನಲ್ಲಿ ಮೂರು ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ.
ಚಾಮರಾಜನಗರ ತಾಲ್ಲೂಕು: ಸಂತೇಮರಹಳ್ಳಿ, ಮಾದಾಪುರ, ಆಲೂರು, ಚಂದಕವಾಡಿ, ಹರದನಹಳ್ಳಿ, ಅಮಚವಾಡಿ, ಉಡಿಗಾಲ, ಹರವೆ, ಹೊಂಗನೂರು
ಗುಂಡ್ಲುಪೇಟೆ ತಾಲ್ಲೂಕು: ಬೇಗೂರು, ಬರಗಿ, ಕಬ್ಬಹಳ್ಳಿ, ತೆರಕಣಾಂಬಿ, ಹಂಗಳ, ಬನ್ನೀತಾಳಪುರ
ಹನೂರು ತಾಲ್ಲೂಕು: ಲೊಕ್ಕನಹಳ್ಳಿ, ಬಂಡಳ್ಳಿ, ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ, ಮಹದೇಶ್ವರ ಬೆಟ್ಟ
ಕೊಳ್ಳೇಗಾಲ ತಾಲ್ಲೂಕು: ಕುಂತೂರು, ಸತ್ತೇಗಾಲ, ಪಾಳ್ಯ, ಕೊಂಗರಹಳ್ಳಿ,
ಯಳಂದೂರು ತಾಲ್ಲೂಕು: ಅಗರ, ಯಳಂದೂರು ಕಸಬಾ, ಕೆಸ್ತೂರು
83 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು: ಕರಡು ಅಧಿಸೂಚನೆಯಲ್ಲಿ ಜಿಲ್ಲೆಯಲ್ಲಿ 83 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ. ಈವರೆಗೆ 89 ಕ್ಷೇತ್ರಗಳಿದ್ದವು.
ಯಳಂದೂರು ತಾಲ್ಲೂಕಿನಲ್ಲಿ ಒಂಬತ್ತು, ಕೊಳ್ಳೇಗಾಲದಲ್ಲಿ 13, ಹನೂರು ತಾಲ್ಲೂಕಿಗೆ 17, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕುಗಳಲ್ಲಿ ಕ್ರಮವಾಗಿ 20 ಹಾಗೂ 24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಲಾಗಿದೆ.
ಚಾಮರಾಜನಗರ: ಜನ್ನೂರು, ಉಮ್ಮತ್ತೂರು, ಸಂತೇಮರಹಳ್ಳಿ, ಮಂಗಲ, ಮರಿಯಾಲ, ಕುದೇರು, ಆಲೂರು, ಜ್ಯೋತಿಗೌಡನಪುರ, ದೊಡ್ಡಮೋಳೆ, ನಾಗವಳ್ಳಿ, ಹರದನಹಳ್ಳಿ, ಪುಣಜನೂರು, ವೆಂಕಟಯ್ಯನಛತ್ರ, ಅಮಚವಾಡಿ, ಅರಕಲವಾಡಿ, ಯಾನಗಹಳ್ಳಿ, ನಂಜೇದೇವನಪುರ, ಹೆಗ್ಗೋಠಾರ, ಹರವೆ, ಸಾಗಡೆ, ಮಲೆಯೂರು, ಇರಸವಾಡಿ, ಹೊಂಗನೂರು ಮತ್ತು ಕೆಂಪನಪುರ.
ಗುಂಡ್ಲುಪೇಟೆ: ಬೇಗೂರು, ಹೊರೆಯಾಲ, ರಾಘವಾಪುರ, ಬರಗಿ, ಕೂತನೂರು, ಬೇರಂಬಾಡಿ, ನಿಟ್ರೆ, ಸೋಮಹಳ್ಖಿ, ಕಬ್ಬಹಳ್ಖಿ, ತೆರಕಣಾಂಬಿ, ಕುಂದಕೆರೆ, ಬೊಮ್ಮಲಾಪುರ, ಬಾಚಹಳ್ಳಿ, ಶಿವಪುರ, ಹಂಗಳ, ಕಣ್ಣೇಗಾಲ, ಬನ್ನಿತಾಳಪುರ, ನೇನೆಕಟ್ಟೆ, ಅಣ್ಣೂರು ಮತ್ತು ಕಗ್ಗಳ.
ಕೊಳ್ಳೇಗಾಲ: ಟಗರಪುರ, ಕುಂತೂರು, ಕುಣಗಳ್ಳಿ, ಸತ್ತೇಗಾಲ, ಧನಗೆರೆ, ಮುಳ್ಳೂರು, ಹರಳೆ, ಪಾಳ್ಯ, ದೊಡ್ಡಿಂದುವಾಡಿ, ತೆಳ್ಳನೂರು, ಕೊಂಗರಹಳ್ಳಿ, ಮಧುವನಹಳ್ಳಿ, ಸಿದ್ದಯ್ಯನಪುರ
ಹನೂರು: ಲೊಕ್ಕನಹಳ್ಳಿ, ಹುತ್ತೂರು, ಪಿ.ಜಿ.ಪಾಳ್ಯ, ಬಂಡಳ್ಳಿ, ಮಂಗಲ, ಮಣಗಳ್ಳಿ, ಕೌದಳ್ಳಿ, ಶಾಗ್ಯ, ರಾಮಾಪುರ, ಸೂಳೇರಿಪಾಳ್ಯ, ಅಜ್ಜೀಪುರ, ಮಾರ್ಟಳ್ಳಿ, ಹೂಗ್ಯಂ, ಮಿಣ್ಯಂ, ಮಹದೇಶ್ವರಬೆಟ್ಟ, ಪೊನ್ನಾಚಿ ಮತ್ತು ಕುರಟ್ಟಿ ಹೊಸೂರು
ಯಳಂದೂರು: ಅಗರ, ಗೌಡಹಳ್ಳಿ, ಮದ್ದೂರು, ಯರಗಂಬಳ್ಳಿ, ಗುಂಬಳ್ಖಿ, ಯರಿಯೂರು, ಕೆಸ್ತೂರು, ಹೊನ್ನೂರು ಮತ್ತು ಅಂಬಳೆ.
ಸಾರ್ವಜನಿಕ ಅಭಿಪ್ರಾಯ ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಆಯೋಗದ ವೆಬ್‌ಸೈಟ್‌ನಲ್ಲಿ ಮತ್ತು ಖುದ್ದಾಗಿ/ಅಂಚೆಯ ಮೂಲಕ ಬೆಂಗಳೂರಿನ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಕಚೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ 15 ದಿನಗಳ ಒಳಗಾಗಿ ಅಂದರೆ ಇದೇ 19ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಬಹುದು. ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ http://rdpr.karnataka.gov.in/rdc/public/ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ಸಲ್ಲಿಸಬಹುದು. ಖುದ್ದಾಗಿ / ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ 3ನೇ ಗೇಟ್ 2ನೇ ಮಹಡಿ ಕೊಠಡಿ ಸಂಖ್ಯೆ:204 ಬಹುಮಹಡಿಗಳ ಕಟ್ಟಡ ಅಂಬೇಡ್ಕರ್ ವೀಧಿ ಬೆಂಗಳೂರು- 560001 ಇಲ್ಲಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.