ADVERTISEMENT

ಸಿರಿಧಾನ್ಯ ಮೇಳಕ್ಕೆ ಕೃಷಿಕರ ದಂಡು

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 13:58 IST
Last Updated 7 ಜನವರಿ 2024, 13:58 IST
ಯಳಂದೂರು ತಾಲ್ಲೂಕಿನ ಸಿರಿಧಾನ್ಯ ಕೃಷಿಕರು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭಾನುವಾರ ತೆರಳಿದರು.
ಯಳಂದೂರು ತಾಲ್ಲೂಕಿನ ಸಿರಿಧಾನ್ಯ ಕೃಷಿಕರು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭಾನುವಾರ ತೆರಳಿದರು.   

ಯಳಂದೂರು: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ತಾಲ್ಲೂಕಿನ 50ಕ್ಕೂ ಹೆಚ್ಚಿನ ರೈತರು ಭಾನುವಾರ ಮುಂಜಾನೆ ತೆರಳಿದರು.

ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಮಾತನಾಡಿ, ‘ಕೃಷಿ ಇಲಾಖೆ ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ಹಾಗೂ ಅವುಗಳ ಮಹತ್ವ ತಿಳಿಸುವ ದೆಸೆಯಲ್ಲಿ ಕೃಷಿಕರನ್ನು ಮೇಳಕ್ಕೆ ಕಳುಹಿಸಲಾಗಿದೆ. ಸರ್ಕಾರ ನೀಡುವ ಧನಸಹಾಯ ಪಡೆದು ಅನ್ನದಾತರು ಮುಂದಿನ ದಿನಗಳಲ್ಲಿ ಸಿರಿಧಾನ್ಯ ಕೃಷಿಯಲ್ಲಿ ತೊಡಗಲು ಸಹಾಯ ಆಗಲಿದೆ. ಹೊಸ ತಳಿಯ ಹಸುಗಳ ಪರಿಚಯ, ಆಡಿನ ಹಾಲಿನ ಮಹತ್ವ, ಕಪ್ಪು ಬೆಲ್ಲ ಹಾಗೂ ಸವಿರುಚಿ ಆಹಾರಗಳ ಸಮಗ್ರ ವಿಷಯಗಳ ಬಗ್ಗೆ ಬೇಸಾಯಗಾರರು ತಿಳಿಯುವರು’ ಎಂದರು.

ಕೃಷಿ ಇಲಾಖೆಯ ನಾಗೇಂದ್ರ ಹಾಗೂ ರೈತರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.