ಯಳಂದೂರು (ಚಾಮರಾಜನಗರ): ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ಪಶು ಆಹಾರ ಸೇವಿಸಿ ನಾಲ್ಕು ರಾಸುಗಳು ಮೃತಪಟ್ಟಿವೆ.
'ಯಳಂದೂರು ಪಟ್ಟಣದ ಅಂಗಡಿಯೊಂದರಲ್ಲಿ ತಂದಿದ್ದ ವೀಟ್ ಬ್ರಾನ್ ಪ್ಲೇಕ್ಸ್ ಹೆಸರಿನ ಆಹಾರವನ್ನು ಜಾನುವಾರುಗಳಿಗೆ ನೀಡಿದ್ದೆವು. ಹಸು ಮತ್ತು ಎತ್ತುಗಳು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಹೊರಳಾಡಿಕೊಂಡು ಅಸುನೀಗಿದವು. ಪಶು ಸಾಕಣೆಯಿಂದ ಜೀವನ ಕಟ್ಟಿಕೊಂಡಿದ್ದ ಕುಟುಂಬಕ್ಕೆ ಲಕ್ಷಾಂತರ ನಷ್ಟವಾಗಿದೆ' ಎಂದು ಮಾಲೀಕ ಬಸವಣ್ಣ ಅವರು ಅಳಲು ತೋಡಿಕೊಂಡರು.
ಈ ಬಗ್ಗೆ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದು, ಆಹಾರ ಪೂರೈಕೆ ಮಾಡಿದ ಅಂಗಡಿಯ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪಶು ಆಹಾರದ ಅವಧಿ ಮೀರಿರುವ ಶಂಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.