ಮಹದೇಶ್ವರ ಬೆಟ್ಟ: ಮಹದೇಶ್ವರಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ 2024- 25ನೇ ಸಾಲಿನ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಗಸ್ಟ್ 21ರಂದು ಏರ್ಪಡಿಸಲಾಗಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರ್ಷಋತು, ಶ್ರಾವಣ ಮಾಸ, ಕೃಷ್ಣಪಕ್ಷದ ಆ. 21ರ ಬುಧವಾರ, ದ್ವಿತೀಯ ತಿಥಿ, ಪೂರ್ವಭಾದ್ರ ನಕ್ಷತ್ರ, ಸುಕರ್ಮ ಯೋಗ, ತೈತುಲ ಕರಣ, ಬೆಳಿಗ್ಗೆ 10.05 ರಿಂದ 10.40 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಜರುಗಲಿದೆ. ಜುಲೈ 25 ಸಂಜೆ 5.00 ಗಂಟೆಯೊಳಗಾಗಿ ನಿಗಧಿತ ನಮೂನೆ (ಅರ್ಜಿ)ಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿದೆ. ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಬಳಿ ನಿಗಧಿತ ನಮೂನೆ ಪಡೆಯತಕ್ಕದ್ದು, ಸಾಮೂಹಿಕ ವಿವಾಹದಲ್ಲಿ ಲಗ್ನವಾಗಲು ಬಯಸುವ ವಧು-ವರರ ಷರತ್ತುಗಳಿಗೊಳಪಟ್ಟಿದೆ. ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ-ರವಿಕೆಯನ್ನು ಹಾಗೂ ವರನಿಗೆ ಪಂಚೆ, ಶರ್ಟು, ಟವಲ್‌ನ್ನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.