ADVERTISEMENT

ಇಂಧನ ದರ ಹೆಚ್ಚಳ | ವಿರೋಧಿಸುವ ನೈತಿಕತೆ ಬಿಜೆಪಿಗಿಲ್ಲ: ಗಿರೀಶ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:50 IST
Last Updated 17 ಜೂನ್ 2024, 15:50 IST
ಗಿರೀಶ್ ಆರ್.ಲಕ್ಕೂರು
ಗಿರೀಶ್ ಆರ್.ಲಕ್ಕೂರು   

ಗುಂಡ್ಲುಪೇಟೆ: ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ. ವಿರೋಧ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್.ಲಕ್ಕೂರು ಲೇವಡಿ ಮಾಡಿದರು.

2014 ಯುಪಿಎ ಸರ್ಕಾರದಲ್ಲಿ ಜಿಡಿಪಿ ಎಷ್ಟಿತ್ತು. ಎನ್‍ಡಿಎ ಅವಧಿಯಲ್ಲಿ ಎಷ್ಟಿದೆ ಎಂಬುದನ್ನು ಬಿಜೆಪಿಯವರು ತಿಳಿದುಕೊಂಡು ಮಾತನಾಡಬೇಕು. ಯುಪಿಎ ಸರ್ಕಾರದಲ್ಲಿ ಗ್ಯಾಸ ಸಿಲಿಂಡರ್‌ ₹ 410 ಇದ್ದದ್ದು, ಎನ್‍ಡಿಎ ಸರ್ಕಾರದಲ್ಲಿ ₹950 ಆಗಿರುವುದರ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ₹50ರಿಂದ ₹60ಕ್ಕೆ ಸಿಗುತ್ತಿತ್ತು. ಅದನ್ನು ಮೋದಿ ಸರ್ಕಾರ ₹100ಕ್ಕೆ ಏರಿಕೆ ಮಾಡಿತ್ತು. 2014ರಲ್ಲಿ ಒಂದು ಡಾಲರ್ ಬೆಲೆ ₹60 ಇದ್ದದ್ದು, 2024ರಲ್ಲಿ ₹80ಕ್ಕೆ ಏರಿಕೆ ಕಂಡಿದೆ. ಆಹಾರ ಪದಾರ್ಥಗಳ ಬೆಲೆಯನ್ನು ಕೊರೊನಾ  ಸಂಕಷ್ಟ ಸಂದರ್ಭದಲ್ಲಿ ಹೆಚ್ಚು ಮಾಡಿದ್ದು, ಬೆಲೆ ಏರಿಕೆ ಅಲ್ಲವೇ ಎಂದು ಪ್ರಶ್ನಿಸಿದರು.

ಕೆಲವು ಬಿಜೆಪಿ ನಾಯಕರು ದೇಶಕ್ಕಾಗಿ, ಮೋದಿಗಾಗಿ ಪೆಟ್ರೋಲ್‌ ಬೆಲೆ ₹500  ಆದರೂ ಪರವಾಗಿಲ್ಲ ಎನ್ನುತ್ತಿದ್ದರು. ಈಗ ರಾಜ್ಯ ಸರ್ಕಾರ ₹3 ಹೆಚ್ಚಳ ಮಾಡಿರುವುದಕ್ಕೆ ಬೊಬ್ಬೆಹಾಕುತ್ತಿದ್ದಾರೆ. ಆದ್ದರಿಂದ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.