ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಹಾಡಿಗಳ ಸೋಲಿಗರ ಗಣೇಶ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಬಿಳಿಗಿರಿಬೆಟ್ಟ ಗ್ರಾಮದ ಎಲ್ಲಾ ಭಕ್ತರು ಗಣೇಶನ ಮೆರವಣಿಗೆಯಲ್ಲಿ ಸಾಗಿದರು. ಈ ಬಾರಿ ಹಾಡಿಗಳಲ್ಲಿ ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದು, ಒಂದು ವಾರ ಕಾಲ ವನಸುಮಗಳಿಂದ ಅಲಂಕರಿಸಿ, ಧೂಪ ದೀಪ ಹಚ್ಚಿ ವಿಶೇಷ ಪೂಜೆ ನೆರವೇರಿಸಿದ್ದರು.
ಬೆನಕನ ವಿಸರ್ಜನೆ ಸಮಯದಲ್ಲಿ ಎಲ್ಲರೂ ಸೇರಿ ವನಭೋಜನ ಸವಿದರು. ಹರಕೆ ಹೊತ್ತವರು ಹಣ್ಣು ಕಾಯಿ ಮಾಡಿಸಿ, ಪಂಚಾಮೃತ ಪ್ರಸಾದ ವಿತರಿಸಿದರು. ಪೂಜೆ ನಂತರ ಸೋಮರನ ಕೆರೆತನಕ ಮೆರವಣಿಗೆ ಸಾಗಿತು. ಸಾಂಪ್ರದಾಯಿಕ ನೃತ್ಯ ಮತ್ತು ದೇವರನ್ನು ಸ್ತುತಿಸುವ ಭಕ್ತಿ ಗಾಯನ ಗಮನ ಸೆಳೆಯಿತು.
‘ವೈಭವದಿಂದ ಜರುಗಿದ ಧಾರ್ಮಿಕ ಕಾರ್ಯದಲ್ಲಿ ಸಾವಿರಾರು ಜನರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು’ ಎಂದು ಬಂಗ್ಲೆಪೋಡು ಕೇತಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.