ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟ, ಮದ್ದೂರು ವಲಯದ ವ್ಯಾಪ್ತಿಯಲ್ಲಿ ಅರ್ಧ ಗಂಟೆಗಳ ಕಾಲ ಜೋರು ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ಕಂಗೆಟ್ಟಿದ ಜನ ಮಳೆಯನ್ನು ಕಂಡು ಹರ್ಷಗೊಂಡರು.
ಬುಧವಾರ ಸಂಜೆ 6ಕ್ಕೆ ಆರಂಭವಾದ ಮಳೆ ಗುಡುಗು, ಸಿಡಿಲು, ಮಿಂಚಿನೊಂದಿಗೆ ಬಿರುಸಿನ ಮಳೆಯಾಯಿತು. ಕಾಡಂಚಿನ ಗ್ರಾಮಗಳಾದ ಹಂಗಳ, ಗೋಪಾಲಪುರ, ದೇವರಹಳ್ಳಿ, ಬೇರಾಂಬಾಡಿ , ಕಲ್ಲಿಗೌಡನಹಳ್ಳಿ ಮೊದಲಾದ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ. ಟೊಮೆಟೋ, ಈರುಳ್ಳಿ, ಅರಿಸಿನ ಮೊದಲಾದ ಬೆಳೆಗಾಗಿ ಭೂಮಿಯನ್ನು ಹದಮಾಡಿಕೊಂಡ ರೈತರು ಮಳೆ ಕಂಡು ಹರ್ಷಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.