ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಕಾರು ನಿಲ್ಲಿಸಿ ಕೆಳಗಿಳಿದು ಆನೆ ದಾಳಿಗೆ ಒಳಗಾಗಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವಿಚಾರಣೆ ನಡೆಸಿ ₹25 ಸಾವಿರ ದಂಡ ವಿಧಿಸಿದೆ.
ಆಂದ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಿಗೆ ಅರಣ್ಯ ಇಲಾಖೆ ₹25 ಸಾವಿರ ದಂಡ ವಿಧಿಸಿದೆ. ಬಂಡೀಪುರಹುಲಿ ಸಂರಕ್ಷಿತ ಪ್ರದೇಶ ಮೂಲೆಹೊಳೆ ವಲಯದಲ್ಲಿ ಫೆಬ್ರುವರಿ 1ರಂದು ಇವರು ಸಂಚರಿಸುತ್ತಿದ್ದಾಗ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದರು. ಕೆಳಗಿಳಿದಿದ್ದ ಇಬ್ಬರನ್ನು ಏಕಾಏಕಿ ಕಾಡಾನೆ ಅಟ್ಟಾಡಿಸಿತ್ತು. ಇಬ್ಬರನ್ನು ಹೆಣ್ಣಾನೆ ಅಟ್ಟಿಸಿದಾಗ ಒಬ್ಬರು ಕೆಳಗೆ ಬೀಳುತ್ತಾರೆ. ಅವರನ್ನು ಕಾಲಿನಲ್ಲಿ ತುಳಿಯಲು ಆನೆ, ಯತ್ನಿಸುತ್ತದೆ. ಅದೃಷ್ಟವಶಾತ್ ಅದರ ಕಾಲು ಅವರ ದೇಹಕ್ಕೆ ತಾಗದೆ ಪಾರಾಗಿದ್ದರು.
ಹೆದ್ದಾರಿಯಲ್ಲಿ ಸಂಚರಿಸುವಾಗ ಆನೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆ ಬದಿಯಲ್ಲಿ ಇರುತ್ತವೆ. ವಾಹನಗಳನ್ನು ನಿಲ್ಲಿಸಬಾರದು ಎಂಬ ಸೂಚನೆ ಇದ್ದರೂ, ನಿಯಮ ಮೀರಿ ವಾಹನಗಳ ನಿಲ್ಲಿಸಿ ಪ್ರಾಣಿ ಪೋಟೊ ತೆಗೆಯುತ್ತಾರೆ. ಈ ಹಿಂದೆಯೂ ಈ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ
ಮಾಧ್ಯಮದಲ್ಲಿ ವರದಿ ಆಧರಿಸಿ ಬಂಡೀಪುರ ಎ.ಸಿ.ಎಫ್. ಹಾಗೂ ಮೂಲೆಹೊಳೆ ಆರ್.ಎಫ್.ಒ. ವಿಚಾರಣೆ ನಡೆಸಿ ಎಂದು ಸಿ.ಎಫ್ ರಮೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.