ADVERTISEMENT

ಗುಂಡ್ಲುಪೇಟೆ: ಪ್ರೊ.ಮಹೇಶ್ ಚಂದ್ರಗುರು ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:29 IST
Last Updated 18 ಆಗಸ್ಟ್ 2024, 14:29 IST
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿರುವ ಊಟಿ-ಮೈಸೂರು ಹೆದ್ದಾರಿಯ ಜಮೀನಿನಲ್ಲಿ ಬೌದ್ಧ ಧರ್ಮ ವಿಧಿ ವಿಧಾನದಂತೆ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅಂತ್ಯಕ್ರಿಯೆ ನೆರವೇರಿತು.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿರುವ ಊಟಿ-ಮೈಸೂರು ಹೆದ್ದಾರಿಯ ಜಮೀನಿನಲ್ಲಿ ಬೌದ್ಧ ಧರ್ಮ ವಿಧಿ ವಿಧಾನದಂತೆ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅಂತ್ಯಕ್ರಿಯೆ ನೆರವೇರಿತು.   

ಗುಂಡ್ಲುಪೇಟೆ: ಮೈಸೂರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅಂತ್ಯಕ್ರಿಯೆ ಇಲ್ಲಿನ ಜಮೀನಿನಲ್ಲಿ ಭಾನುವಾರ ನಡೆಯಿತು.

ಗುಂಡ್ಲುಪೇಟೆ ಪಟ್ಟಣದ ಮನೆ ಹಾಗೂ ಅಂಬೇಡ್ಕರ್ ಸರ್ಕಲ್‌ನಲ್ಲಿ ಸಾರ್ವಜನಿಕರು, ಅಭಿಮಾನಿಗಳ  ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.  ಪಟ್ಟಣದ ಹೊರ ವಲಯದಲ್ಲಿರುವ ಊಟಿ-ಮೈಸೂರು ಹೆದ್ದಾರಿ ಬದಿಯ ಮೃತರ ಜಮೀನಿಗೆ ಕೊಂಡೊಯ್ದರು.

ಬೌದ್ಧ ಧರ್ಮ ವಿಧಿಯಂತೆ ಅಂತ್ಯಕ್ರಿಯೆ: ಮೃತ ಪ್ರೊ.ಮಹೇಶ್ ಚಂದ್ರಗುರು ಅಂತ್ಯಕ್ರಿಯೆಯನ್ನು ಬೌದ್ಧ ಧರ್ಮದ ವಿಧಿಗಳನ್ವಯ ಮೈಸೂರಿನ ಬೋಧಿ ಸೊಸೈಟಿಯ ಬೌದ್ಧ ಬಿಕ್ಕುಗಳು ನಡೆಸಿಕೊಟ್ಟರು.

ADVERTISEMENT

ಶಾಸಕ ಎಚ್.ಎಂ.ಗಣೇಶಪ್ರಸಾದ್, ಮುಖಂಡ ಕಬ್ಬಹಳ್ಳಿ ಮಹೇಶ್, ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ, ಎಚ್.ಆರ್.ರಾಜಗೋಪಾಲ್  ಪ್ರಮುಖರು ಪಾರ್ಥಿವ ಶರೀರದ ಅಂತಿಮ ನಮನ ಸಲ್ಲಿಸಿದರು.

 ಅಂತ್ಯಕ್ರಿಯೆಯಯಲ್ಲಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮೈಸೂರಿನ ಪುರುಷೋತ್ತಮ್,  ಪುಷ್ಪಾ ಅಮರನಾಥ್, ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಸಪ್ನಾ ನಾಯಕ್, ಸಿಂಡಿಕೇಟ್ ಸದಸ್ಯ ಮಹೇಶ್ ಸೋಸಲೆ, ಶಿವರಾಜು, ಕುಮಾರಸ್ವಾಮಿ, ಗೋಪಾಲ್, ದಿಲೀಪ್ ನರಸಯ್ಯ, ಸಂಜಯ್ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.