ಹನೂರು: ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದ ಕಣ್ಣೂರು ಗ್ರಾಮದ ಪ್ರಕಾಶ್ ಎಂಬುವರನ್ನು ಅಬಕಾರಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಹನೂರು ತಾಲ್ಲೂಕಿನ ಕಾಮಗೆರೆ-ಮಂಗಲ ಗ್ರಾಮಗಳ ಮಧ್ಯೆ ರಾಜ್ಯ ಹೆದ್ದಾರಿ-79 ರ ರಸ್ತೆಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಪ್ರಕಾಶ ತನ್ನ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಒಟ್ಟು 6.750 ಲೀ. ಮದ್ಯವನ್ನು ಸಾಗಣೆ ಮಾಡುತ್ತಿದ್ದು, ಆರೋಪಿಯನ್ನು ಬಂಧಿಿ, ಮಧ್ಯವನ್ನು ವಶಕ್ಕೆ ವಶಪಡಿಸಲಾಗಿದೆ.
ಅಬಕಾರಿ ಇನ್‌ಸ್ಪೆಕ್ಟರ್ ಸುನಿಲ್.ಡಿ, ಪಿಎಸ್‌ಐ ಸಿದ್ದಯ್ಯ ಹೆಡ್ ಕಾನ್‌ಸ್ಟೆಟೇಬಲ್‌ಗಳಾದ ರಮೇಶ.ಎಂ. ಸುಂದ್ರಪ್ಪ.ಎಂ.ಎನ್ ಹಾಗೂ ವಾಹನ ಚಾಲಕ ಮಂಜುಪ್ರಸಾದ್ ಸಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.