ADVERTISEMENT

ಹನೂರು: ರೇಷ್ಮೆ ಹುಳು ಸಾಕಣೆ ಘಟಕ ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:21 IST
Last Updated 21 ಜೂನ್ 2024, 16:21 IST
ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದ ರೈತ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ಆಕಸ್ಮಿಕ ಬೆಂಕಿಗೆ ಸುಟ್ಟು ಸಂಪೂರ್ಣವಾಗಿ ಹಾನಿಯಾಗಿದೆ.
ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದ ರೈತ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ಆಕಸ್ಮಿಕ ಬೆಂಕಿಗೆ ಸುಟ್ಟು ಸಂಪೂರ್ಣವಾಗಿ ಹಾನಿಯಾಗಿದೆ.   

ಹನೂರು: ಅಂಬಿಕಾಪುರ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಹುಳು ಸಾಕಣೆ ಘಟಕ ಸಂಪೂರ್ಣ ಭಸ್ಮವಾಗಿದೆ

 ರೇಷ್ಮೆ ಬೆಳೆಗಾರ ಅರುಣ್ ಕುಮಾರ್ ಎಂಬವರು ಜಮೀನಿನಲ್ಲಿ ರೇಷ್ಮೆ ಹುಳು ಸಾಕಣೆ ಘಟಕ ನಿರ್ಮಾಣ ಮಾಡಿದ್ದರು . ಆಕಸ್ಮಿಕ ಬೆಂಕಿಗೆ ರೇಷ್ಮೆ ಹುಳು, ಚಂದ್ರಿಕೆಗಳು, ಕಟ್ಟಿಗೆಯ ರ‍್ಯಾಕ್,  ಪರಿಕರಕಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟವಾಗಿದೆ.

 ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರೇಷ್ಮೆ ಕೃಷಿ ಪರಿಕರಗಳನ್ನು ಖರೀದಿಸಿ, ಸಂಗ್ರಹಿಸಿಟ್ಟಿದ್ದೆ, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ , ಸಂಕಷ್ಟಕ್ಕೆ ಸಿಲುಕಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ರೈತ ಅರುಣ್‌ಗೆ ಜಿಲ್ಲಾಡಳಿತ ಹಾಗೂ  ಕೃಷಿ ಇಲಾಖೆ  ನೆರವು ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.

ADVERTISEMENT

 ರಾಮಾಪುರ ಪೋಲಿಸ್ ಠಾಣೆ  ಎಎಸ್ಐ ಲಿಂಗರಾಜು ಹಾಗೂ ಕಾನ್‌ಸ್ಟೆಬಲ್‌ ಮಹೇಂದ್ರ  ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.