ADVERTISEMENT

ಮಹದೇಶ್ವರ ಬೆಟ್ಟ | ಆರೋಗ್ಯಾಧಿಕಾರಿ ಕಾರ್ಯಾಚರಣೆ: 60 ಪ್ರಕರಣ, ₹15,400 ದಂಡ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:38 IST
Last Updated 16 ಮೇ 2024, 13:38 IST
ದಾಳಿ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದ ಉಡುಪಿ ಹೋಟೆಲ್‌‌ನಲ್ಲಿ ದೊರೆತ ರೆಡಿ ಮೇಡ್ ಪರೋಟಾ
ದಾಳಿ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದ ಉಡುಪಿ ಹೋಟೆಲ್‌‌ನಲ್ಲಿ ದೊರೆತ ರೆಡಿ ಮೇಡ್ ಪರೋಟಾ   

ಮಹದೇಶ್ವರ ಬೆಟ್ಟ: ಆರೋಗ್ಯ ಅಧಿಕಾರಿಗಳ ತಂಡ ಮಲೆ ಮಹದೇಶ್ವರಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ಕೋಟ್ಪಾ ಕಾರ್ಯಚರಣೆ ನೆಡೆಸಿದರು.

ಮಹದೇಶ್ವರಬೆಟ್ಟದ ಬಸ್ ನಿಲ್ದಾಣ ಸೇರಿದಂತೆ ತಪೋಭವನ ರಸ್ತೆ, ತಂಬಡಿಗೆರಿ, ಸಾಲೂರುಮಠ, ದೇವಸ್ಥಾನ ಹಾಗೂ ಮುಖ್ಯ ರಸ್ತೆಗಳಲ್ಲಿರುವ ಹೋಟೆಲ್ ಅಂಗಡಿಗಳನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ನೇತೃತ್ವದ ತಂಡ ಪರಿಶೀಲನೆ ನೆಡೆಸಿ, ದಾಳಿ ನೆಡೆಸಿದರು. ಈ ವೇಳೆ 60ಪ್ರಕರಣಗಳಿಗೆ ₹15,400 ದಂಡ ವಿಧಿಸಿ ಕ್ರಮಕೈಗೊಂಡರು.

ಬಳಿಕ ಡಾ.ಪ್ರಕಾಶ್ ಮಾತನಾಡಿ, ‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಹೋಟೆಲ್ ಸೇರಿದಂತೆ ಚಿಲ್ಲರೆ ಅಂಗಡಿ, ಟೀ ಸ್ಟಾಲ್ ಗಳಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ನಾಮಫಲಕ ಅಳವಡಿಸಿಲ್ಲ. ಹೀಗಾಗಿ ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಧೂಮಪಾನ (ಸಿಗರೇಟ್ ) ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ದಾಳಿ ಮಾಡಲಾಗಿದೆ. ಎಚ್ಚರಿಕೆ ಜೊತೆಗೆ ತಂಬಾಕು ನಿಯಂತ್ರಣ ಕಾಯ್ದೆ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಬಗ್ಗೆ ಮೂಡಿಸಲಾಗಿದೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಎ.ಎಸ್‌.ಐ ಮಾದಪ್ಪ ಸೇರಿದಂತೆ ಅರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.