ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ.
ಕಳೆದೊಂದು ವಾರದಿಂದ ಬಿಸಿಲಿನಿಂದ ಪರಿತಪಿಸಿದ್ದ ಜನರು ಕೊಂಚ ನಿರಾಳರಾಗುವಂತಾಗಿದೆ.
ಶನಿವಾರ ರಾತ್ರಿಯೇ ಮಳೆ ಬರುವ ನಿರೀಕ್ಷೆ ಇತ್ತು. ಗುಡುಗು ಮಿಂಚಿನ ಅಬ್ಬರ ಇದ್ದರೂ ಮಳೆ ಬಂದಿರಲಿಲ್ಲ.
ಭಾನುವಾರ ಬೆಳಿಗ್ಗೆಯಿಂದಲೇ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇತ್ತು.
ಸಂಜೆ ಸುರಿದ ಮಳೆ ಬೆಟ್ಟಕ್ಕೆ ತಂಪು ತುಂಬಿದೆ. ಭಕ್ತರು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಮೊರೆ ಹೋದರು.
ತಾಲ್ಲೂಕಿನ ಸುತ್ತಮುತ್ತ ಮೋಡದ ವಾತಾವರಣ ಇದ್ದು ಮಳೆ ಬರುವ ನಿರೀಕ್ಷೆ ಇದೆ.
ಅತಿಯಾದ ಬಿಸಿಲಿನಿಂದ ಕೃಷಿಕರು ಕಂಗೆಟ್ಟಿದ್ದು, ಬೆಳೆ ಉಳಿಸಿಕೊಳ್ಳಲು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಹನೂರು ತಾಲ್ಲೂಕಿನಲ್ಲೂ ಸಂಜೆ 10 ನಿಮಿಷಗಳ ಕಾಲ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.