ADVERTISEMENT

ವಯನಾಡಿನಲ್ಲಿ ಭಾರಿ ಮಳೆ: ಗುಂಡ್ಲುಪೇಟೆ–ಕೇರಳ ರಾಷ್ಟ್ರೀಯ ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:12 IST
Last Updated 30 ಜುಲೈ 2024, 15:12 IST
<div class="paragraphs"><p>ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿ-766ರ ಮದ್ದೂರು ಚೆಕ್ ಪೋಸ್ಟ್‌ನಿಂದ ವಾಹನಗಳನ್ನು ವಾಪಾಸ್ ಕಳುಹಿಸುತ್ತಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.</p></div>

ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿ-766ರ ಮದ್ದೂರು ಚೆಕ್ ಪೋಸ್ಟ್‌ನಿಂದ ವಾಹನಗಳನ್ನು ವಾಪಾಸ್ ಕಳುಹಿಸುತ್ತಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.

   

ಗುಂಡ್ಲುಪೇಟೆ: ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಗುಂಡ್ಲುಪೇಟೆ–ಕೇರಳ ನಡುವಿನ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು ಕೇರಳಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿ 766 ಉಭಯ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕಕೊಂಡಿಯಾಗಿದ್ದು ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಯನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೇರಳದ ಮುತ್ತಂಗ ಬಳಿಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮಂಗಳವಾರ ಸಂಜೆಯಿಂದಲೇ ಬಂಡಿಪುರ ವ್ಯಾಪ್ತಿಯ ಮೂಲೆಹೊಳೆ ಚೆಕ್ ಪೋಸ್ಟ್ ಬಂದ್‌ ಮಾಡಲು ಆದೇಶಿಸಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕೇರಳಕ್ಕೆ ಹೊರಟಿದ್ದ ವಾಹನಗಳನ್ನು ಮದ್ದೂರು ಗೇಟ್‌ನಿಂದ ವಾಪಸ್ ಕಳುಹಿಸುತ್ತಿದ್ದಾರೆ.

ಮಾರ್ಗ ಬದಲಾವಣೆ:

ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿ-766 ಬಂದ್ ಆಗಿರುವುದರಿಂದ ಕೇರಳದ ಕಡೆಗೆ ಹೋಗುವ ವಾಹನಗಳು ತಮಿಳುನಾಡಿನ ಗೂಡ್ಲೂರು ಮಾರ್ಗವಾಗಿ ಕೇರಳದ ವಯನಾಡಿಗೆ ತೆರಳಬೇಕಾಗಿದೆ. ಈ ಮಾರ್ಗದಲ್ಲಿ ಸಾಗಿದರೆ ವೈನಾಡು ತಲುಪಲು ವಾಹನ ಸವಾರರು ಹೆಚ್ಚುವರಿಯಾಗಿ 70 ಕಿ.ಮೀ ಕ್ರಮಿಸಬೇಕಾಗಿದೆ.

ವಯನಾಡಿಗೆ ಅಧಿಕಾರಿಗಳ ತಂಡ:

ಗುಡ್ಡ ಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯವರು ಸಿಲುಕಿರುಬಹುದು ಎಂಬ ಶಂಕೆಯಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ತಂಡ ವೈನಾಡಿನ ಮುಂಡಕ್ಕೈ ಪ್ರದೇಶಕ್ಕೆ ತೆರಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.