ADVERTISEMENT

ಕೊಳ್ಳೇಗಾಲ | ಗೃಹಬಳಕೆ ಸಿಲಿಂಡರ್ ಅಕ್ರಮ: 8 ಸಿಲಿಂಡರ್ ವಶ

ಪ್ರಜಾವಾಣಿ ವರದಿ ಫಲ ಶೃತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 15:09 IST
Last Updated 19 ಮಾರ್ಚ್ 2024, 15:09 IST
ವಶಪಡಿಸಿಕೊಂಡಿರುವ ಸಿಲಿಂಡರ್ ಗಳು
ವಶಪಡಿಸಿಕೊಂಡಿರುವ ಸಿಲಿಂಡರ್ ಗಳು   

ಕೊಳ್ಳೇಗಾಲ: ನಗರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ದುರ್ಬಳಕೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.

ಗೃಹಬಳಕೆಗೆ ಮಾತ್ರ ಸೀಮಿತವಾಗಿರುವ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಎಗ್ಗಿಲ್ಲದೆ ಬಳಸಲಾಗುತ್ತಿತ್ತು. ಬೀದಿ ಬದಿ ಟೀ ಅಂಗಡಿ, ಹೋಟೆಲ್ ಬೇಕರಿ ಸೇರಿ ಅನೇಕ ಉದ್ಯಮಗಳ ಬಳಕೆಗೆ ಸಿಲಿಂಡರ್ ಬಳಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಪ್ರಜಾವಾಣಿ ಪತ್ರಿಕೆ ಮಾರ್ಚ್13ರ ಬುಧವಾರ ಸಂಚಿಕೆಯಲ್ಲಿ ‘ಅಡುಗೆ ಅನಿಲ ಸಿಲಿಂಡರ್ ದುರ್ಬಳಕೆ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಇದಕ್ಕೆ ಸ್ಪಂದಿಸಿ ಎಚ್ಚೆತ್ತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಇಂದು ನಗರದಲ್ಲಿ ಅನೇಕ ಹೋಟೆಲ್, ಬೇಕರಿ ಸೇರಿ ಸುಮಾರು 15ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ 8 ಗೃಹಬಳಕೆ ಸಿಲಿಂಡರ್ ವಶಪಡಿಸಿಕೊಂಡರು. ಇಲಾಖೆಯ ಇನ್ ಸ್ಪೆಕ್ಟರ್ ಪ್ರಸಾದ್ ಹಾಗೂ ನಗರಸಭೆ ಆರೋಗ್ಯ ನಿರೀಕ್ಷಕ ಚೇತನ್ ನೇತೃತ್ವದಲ್ಲಿ ದಾಳಿ ನಡೆಸಿದರು.

ADVERTISEMENT

‘ಇನ್ನು ಮುಂದೆ ಯಾರೂ ಗೃಹಬಳಕೆ ಸಿಲಿಂಡರ್ ವಾಣಿಜ್ಯಕ್ಕೆ ಬಳಸುವಂತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಇನ್ ಸ್ಪೆಕ್ಟರ್ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಶಪಡಿಸಿಕೊಂಡಿರುವ ಸಿಲಿಂಡರ್ ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.