ADVERTISEMENT

ಅಕ್ರಮ ಮೀನುಗಾರಿಕೆ: ಜಲಚರಗಳಿಗೆ ಕುತ್ತು

ಕಾವೇರಿ ವನ್ಯಧಾಮ, ನದಿಯಲ್ಲೇ ಬಲೆ ಬಿಟ್ಟು ಹೋಗುತ್ತಿರುವ ಮೀನುಗಾರರು

ಬಿ.ಬಸವರಾಜು
Published 7 ಮೇ 2020, 9:30 IST
Last Updated 7 ಮೇ 2020, 9:30 IST
2016ರಲ್ಲಿ ಬಲೆಗೆ ಸಿಕ್ಕಿ ಮೃತಪಟ್ಟ ಜೌಗು ಮೊಸಳೆ
2016ರಲ್ಲಿ ಬಲೆಗೆ ಸಿಕ್ಕಿ ಮೃತಪಟ್ಟ ಜೌಗು ಮೊಸಳೆ   

ಹನೂರು: ಕಾವೇರಿ ವನ್ಯಧಾಮದೊಳಗೆ ಹರಿಯುತ್ತಿರುವ ಕಾವೇರಿ ನದಿಯಲ್ಲಿ, ಅರಣ್ಯ ಸಿಬ್ಬಂದಿಯ ಕಣ್ತಪ್ಪಿಸಿ ರಾತ್ರಿ ವೇಳೆ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಯಿಂದಾಗಿ ನದಿಯಲ್ಲಿರುವ ಜಲಚರಗಳಿಗೆ ಕಂಟಕ ಎದುರಾಗುತ್ತಿದೆ.

ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗುವ ಬೇಟೆಗಾರರು ಕಿತ್ತು ಹೋದ ಬಲೆಗಳನ್ನು ನದಿಯಲ್ಲೇ ಬಿಡುವುದರಿಂದ ಬಲೆಗೆ ಸಿಲುಕಿ ಸಾಕಷ್ಟು ಜಲಚರಗಳು ಮೃತಪಟ್ಟಿವೆ. ಅಧಿಕಾರಿಗಳು ಎರಡು ವಾರಗಳ ಹಿಂದೆ ಅಕ್ರಮ ಮೀನುಗಾರಿಕೆ ಅಡ್ಡೆ ಮೇಲೆ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ.

ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಅಕ್ರಮ ಮೀನುಗಾರಿಕೆ ಈಗ ಎಗ್ಗಿಲ್ಲದೇ ಸಾಗಿದೆ. 10 ದಿನಗಳ ಹಿಂದೆ ಮೂರು ದಿನದ ಅವಧಿಯಲ್ಲಿ ಅರಣ್ಯಾಧಿಕಾರಿಗಳು ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ಸೇರಿದಂತೆ ಅಪಾರ ಪ್ರಮಾಣದ ಪರಿಕರಗಳನ್ನು ವಶಪಡಿಸಿಕೊಂಡಿದ್ದರು.

ADVERTISEMENT

ನದಿಯಲ್ಲಿನಡೆಯುತ್ತಿರುವಅಕ್ರಮಮೀನುಗಾರಿಕೆಚಟುವಟಿಕೆಯಿಂದಕಾವೇರಿವನ್ಯಧಾಮದಲ್ಲಿಜೌಗು‌ ಮೊಸಳೆಯಂತಹವಿಶಿಷ್ಟ ಪ್ರಾಣಿಗಳಿಗೆ ಕುತ್ತು ಉಂಟಾಗಿದೆ.

ಜೌಗು ಮೊಸಳೆಯನ್ನು

ವನ್ಯಜೀವಿಸಂರಕ್ಷಣಾಕಾಯ್ದೆ1979ರಶೆಡ್ಯೂಲ್1ರಅಡಿಯಲ್ಲಿರಕ್ಷಿಸಲಾಗಿದ್ದು,ಅಂತರರಾಷ್ಟ್ರೀಯ ಸಂಸ್ಥೆ ಐಯುಸಿಎನ್ಇದನ್ನು ಅಳವಿನಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಿದೆ.

2016ರಲ್ಲಿ ಇದೇ ವನ್ಯಧಾಮದಲ್ಲಿ

ಅಕ್ರಮಮೀನುಗಾರಿಕೆಗೆಅಳವಡಿಸಿದ್ದಬಲೆಗೆಸಿಲುಕಿಜವುಗುಮೊಸಳೆಯೊಂದುಸತ್ತಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತಮಿಳುನಾಡಿನ ಇಬ್ಬರು ಹಾಗೂ ಒಬ್ಬ ಕರ್ನಾಟಕದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.ಈಚೆಗೆ ಅರಣ್ಯಾಧಿಕಾರಿಗಳು ಅಕ್ರಮ ಮೀನುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಬಲೆಗೆ ಸಿಕ್ಕಿ ಆಮೆಯೊಂದು ಸತ್ತಿತ್ತು.

ತಮಿಳುನಾಡುಗಡಿಯಲ್ಲಿಯಾವುದೇನಿಯಂತ್ರಣಅಥವಾಸಂರಕ್ಷಣಾಕ್ರಮಗಳಿಲ್ಲದಿರುವುದುವನ್ಯಜೀವಿಗಳಿಗೆಸಂಕಷ್ಟತಂದೊಡ್ಡಿದೆ.ತಮಿಳುನಾಡಿನಮೀನುಗಾರಿಕಾಇಲಾಖೆ ಕಾವೇರಿನದಿಯಲ್ಲಿಮೀನುಗಾರಿಕೆಗೆಪರವಾನಿಗೆನೀಡಿದೆ.

‘ಮೀನುಗಾರರುರಾತ್ರಿವೇಳೆಅಕ್ರಮವಾಗಿಕರ್ನಾಟಕದಗಡಿಯೊಳಗೆನುಗ್ಗಿನದಿಯಲ್ಲಿಮೀನುಗಾರಿಕೆ ಮಾಡುತ್ತಾರೆ. ನಮ್ಮ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ವಾಪಸ್ಸಾಗುತ್ತಾರೆ’ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ನದಿಯಲ್ಲಿ ಗಸ್ತು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌.ರಮೇಶ್‌ ಅವರು, ’ಅಕ್ರಮ ಮೀನುಗಾರಿಕೆ ಚಟುವಟಿಕೆಗಳು ಬೆಳಕಿಗೆ ಬಂದ ಮೇಲೆ ಕಾವೇರಿ ನದಿ ತೀರದಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಪ್ರತಿದಿನ ಗಸ್ತು ತಿರುಗುತ್ತಿದ್ದಾರೆ. ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಕಂಡು ಬಂದರೆ, ಮೀನುಗಾರರನ್ನು ತಕ್ಷಣ ಬಂಧಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.