ADVERTISEMENT

ಜಾನಪದ ಕಲೆ ಉಳಿಸಿ ಬೆಳೆಸಬೇಕಿದೆ: ಪುಟ್ಟರಂಗಶೆಟ್ಟಿ

ಅಖಿಲ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 12:29 IST
Last Updated 30 ಜುಲೈ 2023, 12:29 IST
ಚಾಮರಾಜನಗರದ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ಭಾನುವಾರ ಭಾನುವಾರ ನಡೆದ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆ ಉದ್ಗಾಟನಾ ಸಮಾರಂಭ ಮತ್ತು ನೂತನ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಗಾಟಿಸಿದರು.
ಚಾಮರಾಜನಗರದ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ಭಾನುವಾರ ಭಾನುವಾರ ನಡೆದ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆ ಉದ್ಗಾಟನಾ ಸಮಾರಂಭ ಮತ್ತು ನೂತನ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಗಾಟಿಸಿದರು.    

ಚಾಮರಾಜನಗರ: ಸೋಬಾನೆ ಪದ, ರಾಗಿ ಬೀಸುವ ಪದ ಸೇರಿದಂತೆ ಜಿಲ್ಲೆಯಲ್ಲಿರುವ  ವಿವಿಧ ಜನಪದ ಕಲೆಗಳನ್ನು ಉಳಿಸುವುದರ ಜೊತೆಗೆ ಬೆಳೆಸಬೇಕಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಹೇಳಿದರು. 

ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆಯ ಉದ್ಗಾಟನಾ ಸಮಾರಂಭ ಮತ್ತು ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಚಾಮರಾಜನಗರ ಕಲೆಗಳ ತವರೂರು. ಜನಪದೀಯವಾಗಿ ಬೆಳೆದು ಬಂದಿರುವ ಹಲವು ಕಲೆಗಳು ಇಲ್ಲಿವೆ. ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗನ ಸಿರಿವಂತ ಪರಂಪರೆಯೂ ಇದೆ.  ಎಲ್ಲ ಕಲೆಗಳು ಉಳಿಯುವುದರ ಜೊತೆಗೆ ಬೆಳೆಯಬೇಕು. ಹೋರಾಟ ಮಾಡಿಯಾದರೂ ಜಾನಪದ ಕಲಾವಿದರು ಕಲೆಗಳನ್ನು ರಕ್ಷಿಸಿ ಬೆಳೆಸಬೇಕಾಗಿದೆ’ ಎಂದರು.

ADVERTISEMENT

ನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ‘ಕಲಾವಿದರ ರಕ್ಷಣಾ ವೇದಿಕೆ ಮೂಲಕ ಕಲಾವಿದ, ಕಲೆಯನ್ನು ರಕ್ಷಣೆ  ಮಾಡಲು ಹೊರಟಿರುವುದು ಶ್ಲಾಘನೀಯ ಕಾರ್ಯ. ಇಂದಿನ ವ್ಶೆಜ್ಙಾನಿಕ ಕಾಲದಲ್ಲೂ ಜಾನಪದ ಕಲೆ ಇನ್ನೂ ಜೀವಂತವಾಗಿವೆ. ಈ ಕಲೆಗಳು ನೂರಾರು ಕಲಾವಿದರಿಗೆ ಬದುಕಿನ ಜೊತೆಗೆ ದೈವತ್ವವನ್ನು ಕೊಟ್ಟಿವೆ‌’ ಎಂದರು. 

‘ಯಾವುದೇ ಸಂಘ ಬೆಳೆಯಬೇಕಾದರೆ ಅದರ ಸದಸ್ಯರು ಒಗ್ಗಟ್ಟಾಗಿರಬೇಕು’ ಎಂದರು.  

ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಸೇರಿದಂತೆ ಹಲವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ವೀರಗಾಸೆ ಪ್ರದರ್ಶನ, ಗೊರವರ ಕುಣಿತ, ಸೋಬಾನೆ ಪದ ಮತ್ತು ನಾದಸ್ವರ ಸೇರಿದಂತೆ ವಿವಿಧ ಕಲೆಗಳನ್ನು ಕಲಾವಿದರು ಪ್ರದರ್ಶಿಸಿದರು. 

ಅಖಿಲ ಕರ್ನಾಟಕ ಜಾನಪದ ಕಲಾವಿದರ ರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಪ್ರಭುಸ್ವಾಮಿ, ರೈತ ಮುಖಂಡ ಹೆಗ್ಗವಾಡಿ ಮಹೇಶ್‌ಕುಮಾರ್, ಪದ್ಮಶ್ರೀ ಹೆಗಡೆ, ಜಯಕುಮಾರ್, ಶಿವಕುಮಾರ್, ಡಾ.ಶಿವರುದ್ರಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.