ಯಳಂದೂರು: ತಾಲ್ಲೂಕಿನ ಅಮೆ ಕೆರೆ ರಸ್ತೆ ಬಳಿಯ ಶಿವ ಪಾರ್ವತಿ ಗುಹಾ ದೇವಾಲಯದಲ್ಲಿ ಕೊನೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಮುಂಜಾನೆಯಿಂದಲೇ ಭಕ್ತರು ದೇಗುಲಕ್ಕೆ ಆಗಮಿಸಿ ಶಿವರೂಪಿ ಲಿಂಗಕ್ಕೆ ಅರ್ಚನೆ ಮಾಡಿ ವಿವಿಧ ಪುಷ್ಪಗಳನ್ನು ಸಮರ್ಪಿಸಿದರು. ಚತುರ್ಥಿ ವಿಶಾಖ ನಕ್ಷತ್ರದಲ್ಲಿ ನೈವೇದ್ಯ ಬೆಳಗಿ ನಂತರ ಪ್ರಸಾದ ವಿತರಿಸಲಾಯಿತು.
‘ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು ಜರಗುತ್ತವೆ. ಭಕ್ತರು ಹಣ್ಣು ಕಾಯಿ ಮಾಡಿಸಿ, ಕರ್ಪೂರ ಬೆಳಗಿ ತೀರ್ಥ ಪ್ರಸಾದ ಸೇವಿಸುತ್ತಾರೆ. ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಮಹದೇಶ್ವರ ಸ್ವಾಮಿ ಸ್ಮರಿಸಲಾಗುತ್ತದೆ’ ಎಂದು ಅರ್ಚಕ ರಾಮಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.