ADVERTISEMENT

ತಲೆಮೇಲೆ ಕೆಂಡ ಸುರಿದು ಕೊಂಡ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 5:16 IST
Last Updated 31 ಮಾರ್ಚ್ 2024, 5:16 IST
ಸಂತೇಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದಲ್ಲಿ ನಡೆದ ಕೊಂಡೋತ್ಸವದಲ್ಲಿ ದೇವಸ್ಥಾನದ ಅರ್ಚಕ ತಲೆ ಮೇಲೆ ಕೆಂಡ ಸುರಿದುಕೊಳ್ಳುತ್ತಿರುವುದು
ಸಂತೇಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದಲ್ಲಿ ನಡೆದ ಕೊಂಡೋತ್ಸವದಲ್ಲಿ ದೇವಸ್ಥಾನದ ಅರ್ಚಕ ತಲೆ ಮೇಲೆ ಕೆಂಡ ಸುರಿದುಕೊಳ್ಳುತ್ತಿರುವುದು   

ಸಂತೇಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ತಲೆಯ ಮೇಲೆ ಕೆಂಡ ಸುರಿದುಕೊಂಡು ಉರುಕಾತೇಶ್ವರಿ ಕೊಂಡೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.

ಗ್ರಾಮದ ಹೊರ ಭಾಗದಲ್ಲಿರುವ ಉರುಕಾತೇಶ್ವರಿ ದೇವಸ್ಥಾನದ ಮುಂಭಾಗ ಹಾಕಿದ್ದ ಕೆಂಡದ ರಾಶಿಯನ್ನು ದೇವಸ್ಥಾನದ ಅರ್ಚಕ ತಲೆಯ ಮೇಲೆ ಸುರಿದುಕೊಂಡು ಕೊಂಡದ ಹಬ್ಬ ಆಚರಿಸಲಾಯಿತು.
ಮುಂಜಾನೆ ದೇವರ ಆವೇಶ ಬಂದ ಅರ್ಚಕ ಜಮೀನುಗಳ ಕಡೆ ಹೋಗಿ ಮರವನ್ನು ತಬ್ಬುತ್ತಾರೆ. ಈ ಹಸಿ ಮರಕ್ಕೆ ಪೂಜೆ ಸಲ್ಲಿಸಿ ತರಿದು ತಂದು ಉರುಕಾತೇಶ್ವರಿ ದೇವಸ್ಥಾನದ ಮುಂಭಾಗ ರಾಶಿ ಹಾಕಲಾಯಿತು. ನಂತರ ಪೂಜೆ ಸಲ್ಲಿಸಿ ಬೆಂಕಿ ಹಚ್ಚಲಾಯಿತು. ಮುಸ್ಸಂಜೆ ಹೊತ್ತಿಗೆ ನಿಗಿನಿಗಿ ಕೆಂಡ ಸಿದ್ದವಾಗುತ್ತದೆ.
ಗ್ರಾಮದ ಶಂಭುಲಿAಗೇಶ್ವರ ಹಾಗೂ ತೆಳ್ಳೂರಮ್ಮ ದೇವಸ್ಥಾನಗಳಿಂದ ದೇವರ ಮೂರ್ತಿಯನ್ನು ಬಂಡಿಯಲ್ಲಿ ಕೂರಿಸಿ ಸತ್ತಿಗೆ, ಸೂರಿಪಾನಿ, ಕೊಂಬು ಕಹಳೆ ಹಾಗೂ ವಾದ್ಯ ಮೇಳಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಅರ್ಚಕ ಕೊಳಗ ಹಿಡಿದು ಉರುಕಾತೇಶ್ವರಿ ದೇವಸ್ಥಾನದ ಸುತ್ತ ಪ್ರದಕ್ಷಿಣಿ ಹಾಕಿ ಪೂಜೆ ಸಲ್ಲಿಸಿದ ನಂತರ ಅರ್ಚಕ ಕೊಳಗದಲ್ಲಿ ಕೆಂಡವನ್ನು ತುಂಬಿ ಮೈಮೇಲೆ ಸುರಿದುಕೊಳ್ಳುತ್ತಾರೆ.


ಹಿಂದಿನ ದಿನಗಳಲ್ಲಿ ಬಂಡಿ ಉತ್ಸವ ಹಾಗೂ ಕಾಯಿ ಒಡೆದುಕೊಳ್ಳುವ ಮೆರವಣಿಗೆಗಳು ನಡೆದವು. ಹಬ್ಬದ ಅಂಗವಾಗಿ ಉರುಕಾತೇಶ್ವರಿ, ಶಂಭುಲಿAಗೇಶ್ವರ, ತೆಳ್ಳೂರಮ್ಮ ಹಾಗೂ ನಾಡಮೇಗಲಮ್ಮ ದೇವಸ್ಥಾನಗಳು ಸೇರಿದಂತೆ ಗ್ರಾಮದ ಬೀದಿಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ಸಂಭ್ರಮದಿAದ ಹಬ್ಬ ಆಚರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.