ADVERTISEMENT

ಹನೂರು: ಚಿರತೆ ದಾಳಿಗೆ ಎರಡು ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:56 IST
Last Updated 1 ಆಗಸ್ಟ್ 2024, 15:56 IST
ಹನೂರು ತಾಲ್ಲೂಕಿನ ರಾಮನಗುಡ್ಡೆ ಜಮೀನಿನಲ್ಲಿ ಚಿರತೆ ದಾಳಿಗೆ ಮೃತಪಟ್ಟ ಮೇಕೆ
ಹನೂರು ತಾಲ್ಲೂಕಿನ ರಾಮನಗುಡ್ಡೆ ಜಮೀನಿನಲ್ಲಿ ಚಿರತೆ ದಾಳಿಗೆ ಮೃತಪಟ್ಟ ಮೇಕೆ   

ಹನೂರು: ತಾಲ್ಲೂಕಿನ ರಾಮನಗುಡ್ಡೆ ಕೆರೆ ಹಿಂಭಾಗದ ಪಂಡಿತಾರಾಧ್ಯ ಎಂಬುವರ ಜಮೀನಿಗೆ ಮಂಗಳವಾರ ರಾತ್ರಿ ಚಿರತೆ ನುಗ್ಗಿ ಎರಡು ಮೇಕೆಗಳನ್ನು ಕೊಂದು ಹಾಕಿದೆ.

ರಾತ್ರಿ ಒಂದು ಗಂಟೆ ಸಮಯದಲ್ಲಿ ಚಿರತೆ ಕೊಟ್ಟಿಗೆಗೆ ನುಗ್ಗಿದೆ. ಇದರಿಂದ ಗಾಬರಿಯಾದ ಮೇಕೆಗಳು ಕಿರುಚಲಾರಂಭಿಸಿವೆ. ಆಗ ಪಕ್ಕದ ಜಮೀನಿನ ಮೋಹನ್ ಎಂಬುವರು ಕೊಟ್ಟಿಗೆ ಬಳಿ ಹೋದಾಗ ಹೆಜ್ಜೆ ಸಪ್ಪಳ ಕೇಳಿ ಚಿರತೆ ಓಡಿ ಹೋಗಿದೆ. ರಾಮನಗುಡ್ಡಕ್ಕೆ ನೀರು ಹರಿದು ಹೋಗುವ ಹಳ್ಳದಲ್ಲಿ ಬುಧವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿದೆ.

‘ಇಷ್ಟು ದಿನ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರಲಿಲ್ಲ. ಈಗ ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿದು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಜಮೀನಿನ ಮನೆಗಳಲ್ಲಿರುವ ಜಾನುವಾರು, ಮೇಕೆ, ನಾಯಿಗಳ ಮೇಲೆ ದಾಳಿ ಮಾಡಲು ಬರುವ ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿದರೆ ಗತಿಯೇನು? ಅರಣ್ಯ ಇಲಾಖೆಯವರು ಕೂಡಲೇ ಈ ಭಾಗದಲ್ಲಿ ಬೋನು ಇರಿಸಿ ಸೆರೆ ಹಿಡಿದು ಬೇರೆಡೆ ಬಿಡಬೇಕು’ ಎಂದು ಪಿ. ಮೋಹನ್ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.