ADVERTISEMENT

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ| ಮತದಾನ ಪ್ರಮಾಣ ಶೇ 76.81

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 4:20 IST
Last Updated 28 ಏಪ್ರಿಲ್ 2024, 4:20 IST
ಚಾಮರಾಜನಗರದ ರಾಮಸಮುದ್ರದಲ್ಲಿ ತೆರೆಯಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ತಮ್ಮ ಸರದಿಗಾಗಿ ಕಾದಿದ್ದ ಮತದಾರರು 
ಚಾಮರಾಜನಗರದ ರಾಮಸಮುದ್ರದಲ್ಲಿ ತೆರೆಯಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ತಮ್ಮ ಸರದಿಗಾಗಿ ಕಾದಿದ್ದ ಮತದಾರರು    

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನದ ಪ್ರಮಾಣ ಪರಿಷ್ಕರಣೆಯಾಗಿದ್ದು, ಅಂತಿಮ ಲೆಕ್ಕಾಚಾರದಂತೆ ಶೇ 76.81ರಷ್ಟು ಮತದಾನವಾಗಿದೆ. 

17,78,310 ಮಂದಿ ಮತದಾರರಲ್ಲಿ 13,65,944 ಮಂದಿ ಹಕ್ಕು ಚಲಾಯಿಸಿದ್ದಾರೆ.  

8,78,702 ಪುರುಷ ಮತದಾರರ ಪೈಕಿ, 6,82,961 ಮಂದಿ, 8,99,501 ಮಹಿಳೆಯರ ಪೈಕಿ 6,82,952 ಮಂದಿ, 107 ಲಿಂಗತ್ವ ಅಲ್ಪಸಂಖ್ಯಾತ ಮತದಾರರಲ್ಲಿ 31 ಜನರು ಹಕ್ಕು ಚಲಾಯಿಸಿದ್ದಾರೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 77.72 ಪುರುಷರು, ಶೇ 75.93 ಮಹಿಳೆಯರು ಹಾಗೂ ಶೇ 28.97ರಷ್ಟು ಲಿಂಗತ್ವ ಅಲ್ಪಸಂಖ್ಯಾತರು ‘ಜನತಂತ್ರದ ಹಬ್ಬ’ದಲ್ಲಿ ಪಾಲ್ಗೊಂಡಿದ್ದಾರೆ.  

ADVERTISEMENT

ಪರಿಷ್ಕೃತ ಮಾಹಿತಿಯಂತೆ, ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.94, ನಂಜನಗೂಡಿನಲ್ಲಿ ಶೇ 77.02, ವರುಣ ಕ್ಷೇತ್ರದಲ್ಲಿ ಶೇ 78.46, ತಿ.ನರಸೀಪುರದಲ್ಲಿ ಶೇ 74.40, ಹನೂರಿನಲ್ಲಿ ಶೇ 71.94, ಕೊಳ್ಳೇಗಾಲದಲ್ಲಿ ಶೇ 74.43, ಚಾಮರಾಜನಗರದಲ್ಲಿ ಶೇ 78.91 ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ 82.35 ರಷ್ಟು ಮತದಾನವಾಗಿದೆ. 

ಹನೂರು ವಿಧಾನಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರು ಮತದಾನ ನಡೆಯಲಿರುವುದರಿಂದ ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಮತ್ತೆ ಹೆಚ್ಚಳವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.