ಚಾಮರಾಜನಗರ: 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಹನೂರು ತಾಲ್ಲೂಕು ಪಿಜಿ ಪಾಳ್ಯದ ಜೀರಿಗೆ ಗದ್ದೆ ಪೋಡಿನ ಮಾದಮ್ಮ ಅವರು ಆಯ್ಕೆಯಾಗಿದ್ದಾರೆ.
ಸಂಕೀರ್ಣ ಕ್ಷೇತ್ರದಲ್ಲಿ ಮಾದಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೂಲಗಿತ್ತಿಯಾಗಿ, ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿರುವ ಮಾದಮ್ಮ ಅವರಿಗೆ ಈಗ 85 ವರ್ಷ ವಯಸ್ಸು.
ಸೋಲಿಗರ ಬುಡಕಟ್ಟು ಅಭಿವೃದ್ಧಿ ಸಂಘ ಸ್ಥಾಪನೆ ಮಾಡುವ ಸಂದರ್ಭದಲ್ಲೇ ಸಮುದಾಯದ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅವರು, ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ.
ಮಹಿಳಾ ಸಂಘಟನೆಗಳಲ್ಲಿ ತೊಡಗಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡಿ ಹಲವು ಹೋರಾಟಗಳಲ್ಲಿ ಭಾವಹಿಸಿದ್ದಾರೆ.
ಗಿಡಮೂಲಿಕೆಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಮಾದಮ್ಮ, ಪಾರಂಪರಿಕ ನಾಟಿ ಚಿಕಿತ್ಸೆಯಲ್ಲಿ ಪಳಗಿದ್ದಾರೆ. ಸಾವಿರಾರು ಹೆರಿಗೆಗಳನ್ನೂ ಮಾಡಿಸಿದ್ದಾರೆ.
ಸೋಲಿಗ ಸಮುದಾಯದ ಸಂಸ್ಕೃತಿ ಹಾಗೂ ಕಲೆಗಳ ಬಗ್ಗೆ ಜ್ಞಾನವನ್ನು ಹೊಂದಿರುವ ಮಾದಮ್ಮ, ಗೊರುಕನ ಹಾಡು, ಜಾನಪದ ಹಾಡುಗಳು, ಸೋಬಾನೆ ಪದಗಳನ್ನು ಈಗಲೂ ಸ್ಪಷ್ಟವಾಗಿ ಹಾಡಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.