ADVERTISEMENT

ಮಲೆಮಹದೇಶ್ವರ ಬೆಟ್ಟ | ನಾಗಮಲೆಗೆ ಚಾರಣ; ಭಕ್ತರಿಗೆ ಮುಕ್ತ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 5:17 IST
Last Updated 1 ನವೆಂಬರ್ 2024, 5:17 IST
<div class="paragraphs"><p>ನಾಗಮಲೆಗೆ ತೆರಳುವ ಕಾಲ್ನಡಿಗೆ ದಾರಿ (ಸಂಗ್ರಹ ಚಿತ್ರ)</p></div>

ನಾಗಮಲೆಗೆ ತೆರಳುವ ಕಾಲ್ನಡಿಗೆ ದಾರಿ (ಸಂಗ್ರಹ ಚಿತ್ರ)

   

ಹನೂರು (ಚಾಮರಾಜನಗರ ಜಿಲ್ಲೆ): ಮಲೆಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ನಾಗಮಲೆ ಚಾರಣಕ್ಕೆ ವಿಧಿಸಲಾಗಿದ್ದ ನಿಷೇಧ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಅರಣ್ಯ ಸಚಿವರ ಆದೇಶದಂತೆ, ನಾಗಮಲೆಗೆ ತೆರಳಲು ಆನ್‌‌‌ಲೈನ್ ಟಿಕೆಟ್ ಕಡ್ಡಾಯಗೊಳಿಸಿ, 200 ಮಂದಿಗಷ್ಟೇ ಮಾತ್ರ ಅವಕಾಶ ನೀಡಲಾಗುತ್ತಿತ್ತು.

ADVERTISEMENT

ಆದರೆ, ‘ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಭಕ್ತರು ಬರುವುದರಿಂದ ಭಕ್ತರ ಮಿತಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಬೇಕು’ ಎಂದು ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಅವರು ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗೆ(ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು) ಮನವಿ ಮಾಡಿದ್ದರು.

ಅವರಿಗೆ ಸ್ಪಂದಿಸಿರುವ ಪಿಸಿಸಿಎಫ್, ‘ದೀಪಾವಳಿ, ಕಾರ್ತಿಕ ಸೋಮವಾರಗಳು ಸೇರಿ ಇತರೆ ವಿಶೇಷ ದಿನಗಳಲ್ಲಿ ಮಾತ್ರ ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗದಂತೆ ಹಾಗೂ ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿ ಉಂಟು ಮಾಡದೆ ಷರತ್ತಿಗೆ ಒಳಪಟ್ಟು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆ ಒಳಗೆ ನಾಗಮಲೆಗೆ ಹೋಗಬಹುದು. ಅಲ್ಲದೆ, ಸಂಜೆ 6 ಗಂಟೆ ಒಳಗೆ ವಾಪಸು ಬರಲು ಅನುಮತಿ ನೀಡಲಾಗಿದೆ’ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.