ಚಾಮರಾಜನಗರ: ಹಲವು ಪಂಗಡಗಳಾಗಿ ವಿಗಂಡಣೆಯಾಗಿರುವ ಮುಸ್ಲಿಂ ಸಮುದಾಯ ಸಂಘಟಿತಗೊಂಡು ಒಂದೇ ಸೂರಿನಡಿ ಬದುಕುಬೇಕು ಎಂದು ಎಂದು ಹಜರತ್ ಮೌಲಾನಾ ಮಹಮ್ಮದ್ ಶಾಕಿರ್ ಉಲ್ಲ ಸಂದೇಶ ನೀಡಿದರು.
ಷರಿಯತ್ ಹಾಗೂ ಔಖಾಫ್ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಕರೆನೀಡಿದ್ದ ಷರಿಯತ್ ಹಾಗೂ ಔಖಾಫ್ ಉಳಿಸಿ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಔಖಾಫ್ ಆಸ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಗಿದ್ದು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
ಮುಸ್ಲಿಂ ಸಮುದಾಯದ ಎಲ್ಲ ಪಂಗಡಗಳು ಮನಸ್ತಾಪ ಬದಿಗಿಟ್ಟು ಸಮಾಜದ ಆಸ್ತಿ ರಕ್ಷಣೆಗಾಗಿ ಒಂದಾಗಬೇಕು. ಸಮಾಜ ಸಂಘಟಿತವಾದರೆ ಮಾತ್ರ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಕರೆನೀಡಿದರು.
ಮೌಲಾನ ಖಲೀಲ್ ಉರ್ ರೆಹಮಾನ್, ಮೌಲಾನ ಮುಫ್ತಿ ವಸೀಮ್ ಸಾಹೇಬ್ ಮಾತನಾಡಿ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ. ವಕ್ಫ್ ಮಂಡಳಿಗೆ ಸೇರಿರುವ ಆಸ್ತಿಗಳ ರಕ್ಷಣೆ ಮಾಡಲು ಕಾನೂನಾತ್ಮಕ ಹೋರಾಟಕ್ಕೆ ಸಹಕಾರ ನೀಡಬೇಕು. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ನಿದ್ದೆಯಿಂದ ಜಾಗ್ರತರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೌಲಾನಾ ಖಾರಿ ಕಾಮಿಲ್ ನಯೀಮುಲ್ ಹಕ್, ಮೌಲಾನಾ ಮುಫ್ತಿ ಜಾಫರ್ ಹುಸೇನ್ ಖಾಸಿಮಿ, ಮೌಲಾನ ಮೊಹ್ಸಿನ್ ಸಿದ್ದೀಖಿ, ಮೌಲಾನಾ ಮಹಮ್ಮದ್ ಇಸ್ಮಾಯಿಲ್ ರಷಿದಿ, ಮೌಲಾನಾ ಇಕ್ಬಾಲ್ ಅಹ್ಮದ್, ಹಾಫಿಜ್ ಲತೀವುರ್ ರೆಹಮಾನ್, ಮೌಲಾನ ಅಬ್ದುಲ್ ಖಾದರ್, ಮಹಮ್ಮದ್ ಜಿಯಾವುಲ್ಲ, ಸೈಯದ್ ರಫಿ ಹಾಗೂ ಮುಸ್ಲಿಂ ಗುರುಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.