ಚಾಮರಾಜನಗರ:ರಾಜ್ಯ ಹಾಲು ಒಕ್ಕೂಟವು (ಕೆಎಂಎಫ್) ನಂದಿನಿ ಸಿಹಿ ಉತ್ಸವ ಆರಂಭಿಸಿದ್ದು, ಚಾಮುಲ್ ವತಿಯಿಂದಲೂ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಶೇ 20ರ ರಿಯಾಯಿತಿ ದರದಲ್ಲಿ ನಂದಿನಿ ವಿವಿಧ ಬಗೆಯ ಸಿಹಿ ಉತ್ಪನ್ನಗಳು ಸಾರ್ವಜನಿಕರಿಗೆ ದೊರೆಯಲಿವೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಹೇಳಿದರು.
ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ನಂದಿನಿ ವಾಕಿಂಗ್ ಕೋಲ್ಡ್ ಸ್ಟೋರೇಜ್‌ನಲ್ಲಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಂದಿನಿಯ ವಿವಿಧ ಬಗೆಯು 50ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳಿದ್ದು, ಇವುಗಳಿಗೆ ಶೇ 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು,
ಕೆಎಂಎಫ್‌ನಿಂದ ರಾಜ್ಯದಲ್ಲಿರುವ ಎಲ್ಲ ಹಾಲು ಒಕ್ಕೂಟಗಳಲ್ಲೂ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಚಾಮುಲ್ ಮುಖ್ಯ ವ್ಯವಸ್ಥಾಪಕ ರಾಜಶೇಖರಮೂರ್ತಿ ಮಾತನಾಡಿ, ‘ಒಕ್ಕೂಟಕ್ಕೆ ಲಾಭ ಮಾಡುವುದಷ್ಟೇ ಅಲ್ಲದೇ, ರೈತರ ಹಿತರಕ್ಷಣೆ ಮಾಡುವುದರ ಜೊತೆಗೆ ಗ್ರಾಹಕರಿಗೆ ತಾಜ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಒಕ್ಕೂಟದ ಉದ್ದೇಶ’ ಎಂದರು.
ಚಾಮುಲ್ ನಿರ್ದೇಶಕರಾದ ಎಚ್. ಎಸ್. ಬಸವರಾಜು, ಶೀಲಾ ಪುಟ್ಟರಂಗಶೆಟ್ಡಿ, ಸದಾಶಿವಮೂರ್ತಿ, ಅಯ್ಯನಪುರ ಶಿವಕುಮಾರ್, ಚಾಮುಲ್ ಮಾರಾಟಾಧಿಕಾರಿ ರಾಘವೇಂದ್ರ, ವಿಸ್ತರಣಾಧಿಕಾರಿ ಶ್ಯಾಮಸುಂದರ್, ರಮಾನಂದ, ಭಾಗ್ಯರಾಜ್, ಲಕ್ಷ್ಮಿ, ಮಧುಸೂದನ್ ಕೋಲ್ಡ್ ಸ್ಟೋರೇಜ್ ಮಾಲೀಕ ಎನ್.ಆರ್.ಪುರುಷೋತ್ತಮ್, ಮಹೇಶ್ (ಪಾಪು) ಬಿಸಲವಾಡಿ ಮಹೇಶ್, ವಿಜಯಕುಮಾರ್, ಪುನೀತ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.