ADVERTISEMENT

ಚಾಮರಾಜನಗರ: ವರ್ಷದ ಮೊದಲ ದಿನ ದೇವಾಲಯಗಳಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 7:21 IST
Last Updated 1 ಜನವರಿ 2024, 7:21 IST
<div class="paragraphs"><p>ಮಹದೇಶ್ವರ ಬೆಟ್ಟದಲ್ಲಿ ಜನ ಸಾಗರ</p></div>

ಮಹದೇಶ್ವರ ಬೆಟ್ಟದಲ್ಲಿ ಜನ ಸಾಗರ

   

ಚಾಮರಾಜನಗರ: ಹೊಸ ವರ್ಷದ ಮೊದಲ ದಿನವೇ ಜಿಲ್ಲೆಯ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬಂದಿದೆ.

ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಸೋಮವಾರ ಇನ್ನೂ ಹೆಚ್ಚಾಗಿದೆ. ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಬರುತ್ತಿರುವ ಭಕ್ತರು, ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.

ADVERTISEMENT

ಜಿಲ್ಲೆಯ ಮತ್ತೊಂದು ಯಾತ್ರಾ ಸ್ಥಳ ಬಿಳಿಗಿರಿರಂಗನಬೆಟ್ಟದಲ್ಲೂ ಭಕ್ತರ ದಂಡೇ ನೆರೆದಿದೆ. ಹೊಸ ವರ್ಷದ ಮೊದಲ ದಿನ ರಂಗನಾಥಸ್ವಾಮಿಯ ದರ್ಶನ ಪಡೆಯಲು ಜನರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದಿದ್ದಾರೆ.

ಹಿಮವದ್ ಗೋಪಾಲ್ವಾಮಿ ಬೆಟ್ಟ, ಹುಲುಗನ ಮುರಡಿ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರ ಸಂದಣಿ ಕಂಡು ಬರುತ್ತಿದೆ. ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.