ಹನೂರು: ನಾಡ ಬಂದೂಕಿನಿಂದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಾಣೆ ಮಾಡುತ್ತಿದ್ದ ಕಾಂಚಳ್ಳಿ ಗ್ರಾಮದ ಮುರುಗೇಗೌಡ ಎಂಬ ವ್ಯಕ್ತಿಯನ್ನು ಮಲೆಮಹದೇಶ್ವರ ವನ್ಯಾಧಾಮದ ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಆರೋಪಿ ಬಳಿಯಿಂದ ಒಂದು ನಳಿಕೆಯ ನಾಡ ಬಂದೂಕು ಮತ್ತು 20 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಹನೂರು ವನ್ಯಜೀವು ವಲಯದ ಪಚ್ಚೆದೊಡ್ಡಿ ಶಾಖೆಯ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 4 ಗಂಟೆ ಸಮಯದಲ್ಲಿ ನಾಡ ಬಂದೂಕಿನೊಂದಿಗೆ ಕೆಲವರು ಅಡ್ಡಾಡುತ್ತಿದ್ದುದ್ದನ್ನು ಗಮನಿಸಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಕಾಂಚಳ್ಳಿ ಗ್ರಾಮದ ಪೆರುಮಾಳಶೆಟ್ಟಿ, ಮಾದೇಶ್, ಮುತ್ತೇಗೌಡ, ಗೋವಿಂದೇಗೌಡ ಪರಾರಿಯಾಗಿ ಮುರುಗೇಗೌಡ ಸಿಕ್ಕಿ ಬಿದ್ದಿದ್ದಾರೆ.
ಆತನನ್ನು ಬಂಧಿಸಿರುವ ಅಧಿಕಾರಿಗಳು, ಒಂಟಿ ನಳಿಕೆಯ ನಾಡಬಂದೂಕು ಹಾಗೂ 20 ಕೆ.ಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.