ADVERTISEMENT

ಹನೂರು | ಶಾಲೆಗೊಂದು ಸೇವಾದಳ ಶಾಖೆ ತೆರೆಯಿರಿ: ಬಿಇಒ ಶಿವರಾಜ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 16:17 IST
Last Updated 15 ಜುಲೈ 2023, 16:17 IST
ಹನೂರು ಪಟ್ಟಣದ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ಒಂದು ದಿನದ ಪುನರ್ ಚ್ಚೇತನ ಕಾರ್ಯಕ್ರಮದಲ್ಲಿ ಬಿಇಓ ಶಿವರಾಜು ಮಾತನಾಡಿದರು.
ಹನೂರು ಪಟ್ಟಣದ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ಒಂದು ದಿನದ ಪುನರ್ ಚ್ಚೇತನ ಕಾರ್ಯಕ್ರಮದಲ್ಲಿ ಬಿಇಓ ಶಿವರಾಜು ಮಾತನಾಡಿದರು.   

ಹನೂರು: ಪ್ರಸ್ತುತ ದಿನಗಳಲ್ಲಿ ರಾಷ್ಟ್ರೀಯತೆಯ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ದೇಶಪ್ರೇಮವನ್ನು ಹುಟ್ಟುಹಾಕಲು ಪ್ರತಿ ಶಾಲೆಯಲ್ಲಿ ಸೇವಾದಳದ ಶಾಖೆಗಳನ್ನು ತೆರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ತಿಳಿಸಿದರು.

ಭಾರತ ಸೇವಾದಳ ತಾಲ್ಲೂಕು ಸಮಿತಿ ಹಾಗೂ ಶಾಲಾ ಶಿಕ್ಷಣ ಹನೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉನ್ನತೀಕರಿಸಿದ ಮಾದರಿ ಶಾಲೆಯಲ್ಲಿ ನಡೆದ ಶಿಕ್ಷಕರ ಒಂದು ದಿನದ ಪುನರ್ ಚ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸೇವಾದಳ ಸಂಸ್ಥೆ ಸ್ವಾತಂತ್ರ್ಯ ಗಳಿಸಲು ಹಿಂದೂಸ್ತಾನಿ ಸೇವಾದಳದ ಹೆಸರಿನಲ್ಲಿ ಸಂಘಟನೆಯಾಗಿ ಸ್ವಾತಂತ್ರ್ಯ ಭಾರತದಲ್ಲಿ ಹೆಸರಾಗಿದೆ. ಭಾರತ ಸೇವಾದಳ ಎಂಬ ಹೆಸರಿನಿಂದ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ಗೀತೆ, ರಾಷ್ಟ್ತೀಯ ಭಾವೈಕ್ಯತಾ ಮೇಳ, ಮಕ್ಕಳ‌ನಾಯಕತ್ವ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದರು.

ADVERTISEMENT

ಭಾರತ ಸೇವಾದಳದ ತಾಲ್ಲೂಕು ಸಮಿತಿ ಅಧ್ಯಕ್ಷ ಪುರಂದರರಾಮ್, ಉಪಾಧ್ಯಕ್ಷ ಗಿರೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಜಿಲ್ಲಾ ಸಂಘಟಕ ಇ.ಅರುಣ್, ರಾಜ್ಯ ಸಂಪನ್ಮೂ ಶಿಕ್ಷಕ ಪಳನಿಸ್ವಾಮಿ ಜಾಗೇರಿ, ಅಧಿನಾಯಕ ಜೋಸೇಫ್, ಕಾರ್ಯದರ್ಶಿ ಸೆಂದಿಲ್ ಕುಮಾರ್, ಧರ್ಮಲಿಂಗಮ್, ಅಬ್ದುಲ್ ಜಮೀರ್, ರೋಜ್ ಮೇರಿ, ಪ್ರದೀಪ್ ಕುಮಾರ್, ಮದಳಿಯಮ್ಮಾಳ, ಧನರಾಜ್ ಮೋಚರಾಗಿಣಿ, ಮರಿಯಮದಳಿಯಮ್ಮ ರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.