ಗುಂಡ್ಲುಪೇಟೆ: ತಾಲ್ಲೂಕು ಆಡಳಿತ ಅ.17ರಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ.
ವಾಲ್ಮೀಕಿ ಜಯಂತಿ ಆಚರಣೆ ಸಿದ್ಧತಾ ಸಭೆಯಲ್ಲಿ ಸಮುದಾಯ ಮುಖಂಡರ ಸಲಹೆ ಆಲಿಸಿ ಮಾತನಾಡಿದ ತಹಶೀಲ್ದಾರ್ ಟಿ.ರಮೇಶ್ ಬಾಬು, ವಾಲ್ಮೀಕಿ ಜಯಂತಿಯನ್ನು ತಾಲ್ಲೂಕು ಕಚೇರಿ ಸಭಾ ಭವನದಲ್ಲಿ ಆಚರಿಸಲಾಗುವುದು. ಮುಖ್ಯ ಭಾಷಣಕಾರರಾಗಿ ಎಲ್‍ಐಸಿ ಮಹೇಶ್‍ಗೆ ಆಹ್ವಾನ, ನಾಯಕ ಸಮುದಾಯದ ಮೂವರು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಜನ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂದು ಪುರಸಭೆ ಸದಸ್ಯ ಎನ್.ಕುಮಾರ್ , ಬೇರಂಬಾಡಿ ರಂಗಪ್ಪನಾಯಕ , ಅಸಮಾಧಾನ ವ್ಯಕ್ತಪಡಿಸಿ, ಆಡಳಿತವು ಸಮಾಜದವರನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಆಚರಣೆ: ಅ.17ರಂದು ಸಾಂಕೇತಿಕ ಆಚರಣೆ ನಂತರ ಸಮುದಾಯದಿಂದ ಮತ್ತೊಂದು ದಿನ ಅದ್ದೂರಿಯಾಗಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುವುದು ಎಂದು ನಾಯಕ ಸಮಾಜದ ಮುಖಂಡರು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್, ಶಿರಸ್ತೇದಾರ್ ಮಹೇಶ್, ವಿವಿಧ ಗ್ರಾಮಗಳ ನಾಯಕ ಸಮುದಾಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.