ಮಹದೇಶ್ವರ ಬೆಟ್ಟ (ಚಾಮರಾಜನಗರ): ಇದೇ 26ರಂದು ಲೋಕಸಭಾ ಚುನಾವಣೆಯ ಮತದಾನದ ದಿನ ಘರ್ಷಣೆ ನಡೆದಿದ್ದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ಆರಂಭವಾಗಿದೆ.
ಮತಗಟ್ಟೆ ಹಾಗೂ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂಡಿನಗತ್ತ ಮತ್ತು ಮೆಂದಾರೆ ಗ್ರಾಮಗಳ ಮತದಾರರು ಈ ಮತಗಟ್ಟೆ ವ್ಯಾಪ್ತಿಗೆ ಬರುತ್ತಿದ್ದು, ಒಟ್ಟು 528 ಮತದಾರರಿದ್ದಾರೆ. ಇವರಲ್ಲಿ 279 ಪುರುಷರು ಮತ್ತು 249 ಮಹಿಳೆಯರು.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಈವರೆಗೆ ಮೆಂದಾರೆ ಗ್ರಾಮದ 54 ಮಂದಿ ಹಾಗೂ ಇಂಡಿಗನತ್ತ ಗ್ರಾಮದ ಒಬ್ಬರು ಹಕ್ಕು ಚಲಾಯಿಸಿದ್ದಾರೆ.
26ರಂದು ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯ ವೇಳೆ ಉದ್ರಿಕ್ತರು ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ, ಇವಿಎಂ ಹಾಗೂ ಇತರ ಪರಿಕರಗಳಿಗೆ ಹಾನಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.