ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಹುಂಡಿಯಲ್ಲಿ ₹2.20 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:55 IST
Last Updated 28 ಜೂನ್ 2024, 15:55 IST
ಹುಂಡಿ ಹಣ ಎಣಿಕೆ ಮಾಡುತ್ತಿರುವ ದೇವಾಲಯದ ನೌಕರರು
ಹುಂಡಿ ಹಣ ಎಣಿಕೆ ಮಾಡುತ್ತಿರುವ ದೇವಾಲಯದ ನೌಕರರು   

ಮಹದೆಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಬೆಳ್ಳಿ ಮತ್ತು ಚಿನ್ನದ ಎಣಿಕೆ, ಪರ್ಕಾವಣೆ ಕಾರ್ಯ ಶುಕ್ರವಾರ ಜರುಗಿತು.

 ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು ಹುಂಡಿಯಲ್ಲಿ ₹2,20,97,533 ಮೌಲ್ಯದ ನಗದು, ಸಾಮಗ್ರಿ ಸಂಗ್ರಹವಾಗಿದೆ. 106 ಗ್ರಾಂ ಚಿನ್ನ , ಹಾಗೂ 2.100 ಕೆ.ಜಿ. ಬೆಳ್ಳಿ ಸಾಮಗ್ರಿ ಸಂಗ್ರಹವಾಗಿವೆ.  6 ವಿದೇಶಿ ನೋಟುಗಳು ದೊರೆತಿವೆ. 3 ಡಾಲರ್, 1 ಅರಬ್‌ , 1 ನೇಪಾಳ ಹಾಗೂ 1 ಒಮನ್ ನೋಟುಗಳು ದೊರೆತಿವೆ. ಇ– ಹುಂಡಿಯಿಂದ ₹3, 38, 830 ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT