ADVERTISEMENT

ಶಾಲೆ ಕಾಲೇಜು ಬಳಿ ಮಾದಕ ವಸ್ತು ಮಾರಾಟ: ಅಪರಾಧ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:50 IST
Last Updated 28 ಜೂನ್ 2024, 15:50 IST
ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಎಸ್‍ಐ ಚಂದ್ರಶೇಖರ್ ಮಾತನಾಡಿದರು.
ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಎಎಸ್‍ಐ ಚಂದ್ರಶೇಖರ್ ಮಾತನಾಡಿದರು.   

ಸಂತೇಮರಹಳ್ಳಿ: ಶಾಲಾ ಕಾಲೇಜುಗಳ ಸುತ್ತ ಮಾದಕ ಪದಾರ್ಥಗಳನ್ನು ಮಾರಾಟ ಮಾಡುವುದು ಅಪರಾಧ ಎಂದು ಎಎಸ್‍ಐ ಚಂದ್ರಶೇಖರ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹದಿ ಹರೆಯದ ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ತಿಳಿಸಿ ಅದು ಸಮಾಜದಲ್ಲಿ ಉಂಟು ಮಾಡುವ ಸಮಸ್ಯೆಗಳನ್ನು ತಿಳಿಸುವ ಕೆಲಸ ಆಗಬೇೀಕು. ಸೇವನೆಯಿಂದ ವ್ಯಕ್ತಿಗಳು ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಂಡು ಸಮಾಜ ಕಂಟಕವಾಗುವ ಅಪಾಯ ಎದುರಾಗುತ್ತದೆ. ಕೋಟ್ಪಾ ಕಾಯಿದೆಯಡಿಯಲ್ಲಿ ಮಾದಕ ವಸ್ತು ಮಾರಾಟ  ಹಾಗೂ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡುವುದು ಕಂಡು ಬಂದರೆ ಅಂಥವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.
ಪೋಷಕರು ತಂಬಾಕು ಮುಕ್ತ ಜೀವನ ಮಾಡಿ  ಮಕ್ಕಳಿಗೆ ಮಾದರಿಯಾಗಿ ಇರಬೇಕು. ಮಕ್ಕಳು ಬಳಸುವುದು ಕಂಡರೆ  ಶಿಕ್ಷಕರು, ಪೊಲೀಸರು ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರೆ ಕಾನೂನು ಕ್ರಮ ಜರುಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪ್ರಭಾರ ಮುಖ್ಯಶಿಕ್ಷಕ ಪುಟ್ಟರಾಜು, ಪಿಎಸ್‍ಐ ತಾಜುದ್ಧೀನ್, ಶಿಕ್ಷಕರಾದ ಶಾಂತಮೂರ್ತಿ, ಮಹದೇವಸ್ವಾಮಿ, ನಾಗೇಶ್, ಪ್ರಕಾಶ್, ಆಶಿಯಮ್ಮ, ಸುಮನಕುಮಾರಿ, ಸುಮಾಚೌದರಿ, ಮಹೇಶ್ವರಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.