ADVERTISEMENT

ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡನೇ ಸಫಾರಿ ಕೇಂದ್ರ: ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 0:30 IST
Last Updated 2 ಅಕ್ಟೋಬರ್ 2024, 0:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹನೂರು: ‘ಮಲೈಮಹದೇಶ್ವರ ವನ್ಯಧಾಮದಲ್ಲಿ ಅ.2ರಿಂದ ಎರಡನೇ ಹಂತದಲ್ಲಿ ಸಫಾರಿ ಆರಂಭವಾಗಲಿದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಪಿ.ಜಿ.ಪಾಳ್ಯ 18 ಕಿ.ಮೀ ಸಫಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಲೊಕ್ಕನಹಳ್ಳಿಯಲ್ಲಿ ಚಾಲನೆ ನೀಡಿದ್ದಾರೆ. ಸಫಾರಿ ಪ್ರದೇಶದಲ್ಲಿ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೋಳ, ನರಿ ಕಂಡು ಬಂದಿವೆ. ಈ ಸಫಾರಿಯನ್ನು ಇದುವರೆವಿಗೂ 3 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ 400ಕ್ಕೂ ಹೆಚ್ಚು ಶಾಲಾ ಮಕ್ಕಳು ಭೇಟಿ ನೀಡಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.

ADVERTISEMENT

ಈಗ ಎರಡನೇ ಹಂತದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಯಾತ್ರಾರ್ಥಿಗಳಿಗಾಗಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಹಾಗೂ ವನ್ಯಪ್ರಾಣಿಗಳ ವೀಕ್ಷಣೆಗಾಗಿ ಉಡುತೊರೆಹಳ್ಳ ಜಲಾಶಯ ಆರಣ್ಯ ಪ್ರದೇಶದ ಕಡೆಯಿಂದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಲೊಕ್ಕನಹಳ್ಳಿಯವರೆಗೆ ಸಫಾರಿಯನ್ನು ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ಅನುಮತಿ ಕೋರಲಾಗಿತ್ತು. ಅನುಮತಿ ದೊರೆತಿದ್ದು, ಬುಧವಾರದಿಂದ ಸಫಾರಿ ಆರಂಭವಾಗಲಿದೆ.

ಅಜ್ಜೀಪುರ ಗ್ರಾಮದ ಕಾವೇರಿ ನೀರಾವರಿ‌ ನಿಗಮದ ಹಾಯಕ ಕಾರ್ಯನಿರ್ವಹಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಫಾರಿಗೆ ತೆರಳಲು ಸ್ಥಳ ನಿಗಧಿಪಡಿಸಲಾಗಿದೆ. ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಸಫಾರಿ ನಡೆಯಲಿದೆ. ವಯಸ್ಕರಿಗೆ ₹ 400 , ಮಕ್ಕಳಿಗೆ ₹ 200 ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.