ADVERTISEMENT

ಚಾಮರಾಜನಗರ: ಶ್ರೀರಾಮ ಮಂದಿರದಲ್ಲಿ ವಿಜೃಂಭಣೆಯ ಓಕುಳಿ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:08 IST
Last Updated 1 ಮೇ 2024, 14:08 IST
ಚಾಮರಾಜನಗರದ ಶಂಕರಪುರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಶನಿವಾರ ನಡೆದ ಓಕುಳಿ ಉತ್ಸವದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು
ಚಾಮರಾಜನಗರದ ಶಂಕರಪುರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಶನಿವಾರ ನಡೆದ ಓಕುಳಿ ಉತ್ಸವದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು   

ಚಾಮರಾಜನಗರ: ನಗರದ ಶಂಕರಪುರ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿ ಪಟ್ಟಾಭಿಷೇಕದ ಅಂಗವಾಗಿ ಶನಿವಾರ ಆಂಜನೇಯ ಉತ್ಸವ ಮತ್ತು ಓಕುಳಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. 

ರಾಮ ಮಂದಿರದ ಮುಂಭಾಗ ಹಾಗೂ ಶಂಕರಪುರ ಬಡಾವಣೆಯ ರಸ್ತೆಯಲ್ಲಿ ಮನೆಗಳ ಮುಂಭಾಗ ಮಕ್ಕಳು, ಹಿರಿಯರು ಬಣ್ಣದ ನೀರನ್ನು ಪರಸ್ಪರ ಪರಸ್ಪರ ಎರಚಾಡಿದರು. 

ಉಪನ್ಯಾಸಕ ಸುರೇಶ ಎನ್ ಋಗ್ವೇದಿ ಮಾತನಾಡಿ, ‘ಶಂಕರಪುರ ಶ್ರೀರಾಮ ಮಂದಿರದಲ್ಲಿ ಏಳು ದಶಕಗಳಿಂದಲೂ ನಿರಂತರವಾಗಿ ಶ್ರೀ ರಾಮನ ಉತ್ಸವ ನಡೆಯುತ್ತಿದ್ದು 10 ದಿನಗಳ ಕಾಲ ನಡೆಯುವ ಉತ್ಸವದ ಅಂಗವಾಗಿ ಕೊನೆಯ ದಿನ ಆಂಜನೇಯ ಉತ್ಸವ ನಡೆಯುತ್ತದೆ. ಪ್ರತಿ ಮನೆಮನೆಗೂ ಆಂಜನೇಯನ ಮೆರವಣಿಗೆ ಹೋಗಿ ವಿಶೇಷ ಪೂಜೆ ನೆರವೇರಿಸಿ ಕಾಣಿಕೆಗಳನ್ನು ಸ್ವೀಕರಿಸಿ ಶ್ರೀರಾಮ ಮಂದಿರಕ್ಕೆ ತೆರಳಿದ ನಂತರ ವಾಗಿ ಓಕುಳಿ ಕಾರ್ಯಕ್ರಮ ನಡೆಯುತ್ತದೆ’ ಎಂದರು. 

ADVERTISEMENT

‘ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ, ಯುವ ಪೀಳಿಗೆ ಪರಸ್ಪರ ಭಾವೈಕ್ಯತೆ ಏಕತೆ, ಪ್ರೀತಿ, ವಿಶ್ವಾಸ, ನಂಬಿಕೆ ಆಧ್ಯಾತ್ಮಿಕ ಭಾವನೆ ಹಾಗೂ ಭಗವಂತನಲ್ಲಿ ದೃಢವಾದ ವಿಶ್ವಾಸ ಇಟ್ಟು, ಬಡವ ಶ್ರೀಮಂತ ಎಂಬ ಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಓಕುಳಿಯಲ್ಲಿ ಪಾಲ್ಗೊಳ್ಳಲಾಗುತ್ತದೆ. ಆಧ್ಯಾತ್ಮಿಕ ಕಾರ್ಯಕ್ರಮವಾದ ಓಕುಳಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ’ ಎಂದರು. 

ಶ್ರೀ ರಾಮಮಂದಿರದ ಪ್ರತಾಪ್, ಸತೀಶ್, ಕೇಶವಮೂರ್ತಿ, ರಾಜಗೋಪಾಲ್, ವತ್ಸಲ ರಾಜಗೋಪಾಲ್, ರಂಗನಾಥ್ ವಿಜಯಲಕ್ಷ್ಮಿ, ಸರಸ್ವತಿ ,ರಾಧಾಕೃಷ್ಣ, ಸುದರ್ಶನ್, ಮುರುಗೇಶ್, ನವೀನ ಉಮೇಶ್, ರವಿ, ಶ್ರೇಯಸ್ ರಘುನಾಥ್, ಕಾರ್ತಿಕ್, ರಮೇಶ್, ಶ್ರೀಮತಿ, ಶರಣ್ಯ, ಶ್ರಾವ್ಯ ಋಗ್ವೇದಿ, ಸಾನಿಕ, ಸುಮನ್, ವರ್ಷಿಣಿ, ಶ್ರೇಯಸ್, ಮಾಲಾ, ವಾಣಿ, ಪದ್ಮಿನಿ ಮೇಘನಾ ಇತರರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.