ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಅಧಿಕಾರಿಗಳು ಬೀದಿ ದನಗಳನ್ನು ಹಿಡಿದು ಮಾಲೀಕರಿಗೆ ದಂಡ ವಿಧಿಸಿ, ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.
ನಗರದ 31 ಬಡಾವಣೆಗಳಲ್ಲಿ ಬೀದಿ ದನಗಳ ಹಾವಳಿ ಪ್ರತಿನಿತ್ಯ ಹೆಚ್ಚಾಗುತ್ತಿತು. ಇ ಸಾರ್ವಜನಿಕರು ನಗರಸಭೆಗೆ ಲಿಖಿತ ಹಾಗೂ ಮೌಖಿಕವಾಗಿ ಅನೇಕ ಬಾರಿ ದೂರು ನೀಡಿದ್ದರು. ನಗರ ಸಭೆಯ ಪರಿಸರ ಎಂಜಿನಿಯರ್ ಪ್ರಸನ್ನ ಹಾಗೂ ಆರೋಗ್ಯ ನಿರೀಕ್ಷಕ ಚೇತನ್ ಅವರಿದ್ದ ತಂಡ 10ಕ್ಕೂ ಹೆಚ್ಚು ಹಸುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ವಿಧಿಸಿದೆ. ಮುಚ್ಚಳಿಕೆ ಬರೆಸಲಾಗಿದೆ.
ಸುದ್ದಿಗಾರರೊಂದಿಗೆ ಪರಿಸರ ಎಂಜಿನಿಯರ್ ಪ್ರಸನ್ನ ಮಾತನಾಡಿ, ಹಸುಗಳನ್ನು ಬೀದಿಗೆ ಬಿಡಬಾರದು ಎಂದು ರಿಕ್ಷಾದಲ್ಲಿ ಪ್ರಚಾರ, ಪ್ರಕಟಣೆ ನೀಡಿದ್ದೆವು. ಹಾಗಿದ್ದರೂ ಮಾಲೀಕರು ದನಗಳನ್ನು ರಸ್ತೆಗೆ ಬಿಡುತ್ತಿದ್ದರು. ಅಪಘಾತವನ್ನು ತಪ್ಪಿಸುವ ಉದ್ದೇಶದಿಂದ ಬೀದಿ ಜಾನುವಾರುಗಳನ್ನು ವಶಕ್ಕೆ ಪಡೆದು, ದಂಡವನ್ನು ಸಹ ವಿಧಿಸಿದ್ದೇವೆ. ಮುಂದಿನ ಬಾರಿ ಹಸುಗಳನ್ನು ವಶಕ್ಕೆ ಪಡೆದು ಪಿಂಜರಪೋಲ್‌ಗೆ ಬಿಡಲಾಗುವುದು ಎಂದು ಹೇಳಿದರು. ಮಾಲೀಕರು ದಂಡ ಮೊತ್ತ ತುಂಬಿ ಹಸುಗಳನ್ನು ಬಿಡಿಸಿಕೊಂಡು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.