ಚಾಮರಾಜನಗರ: ರಾಮಕೃಷ್ಣ ಪರಮಹಂಸರ 188ನೇ ಜನ್ಮದಿನೋತ್ಸವದ ಪ್ರಯುಕ್ತ ಮೈಸೂರಿನ ಸುಯೋಗ್ ಆಸ್ಪತ್ರೆಯು ಗುರುವಾರದಿಂದ (ಫೆ.22) 29ರವರೆಗೆ ಹೃದ್ರೋಗ ತಪಾಸಣೆ, ಆ್ಯಂಜಿಯೋಗ್ರಾಂ ಹಾಗೂ ಆ್ಯಂಜಿಯೋಪ್ಲಾಸ್ಟಿ ಶಿಬಿರವನ್ನು ಹಮ್ಮಿಕೊಂಡಿದೆ.
ಇದು ಮೂರನೇ ವರ್ಷದ ಶಿಬಿರವಾಗಿದ್ದು, ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಪ್ರತಿದಿನ 50 ಮಂದಿಗೆ ಹೃದಯ ತಪಾಸಣೆ ಮಾಡಲು ಅವಕಾಶವಿದ್ದು, ಅವಶ್ಯಕತೆ ಇರುವ ಕಡು ಬಡವರಿಗೆ ಉಚಿತವಾಗಿ ಆ್ಯಂಜಿಯೋಗ್ರಾಂ ಹಾಗೂ ಆ್ಯಂಜಿಯೋಪ್ಲಾಸ್ಟಿ ಮಾಡಲಾಗುವುದು. ಹೃದ್ರೋಗ ತಜ್ಞರಾದ ಡಾ.ರವಿಕುಮಾರ್ ಹಾಗೂ ಡಾ.ಆದಿತ್ಯ ಉಡುಪ ಶಿಬಿರದ ನೇತೃತ್ವ ವಹಿಸಲಿದ್ದು, ಮಾಹಿತಿ ಹಾಗೂ ಹೆಸರು ನೋಂದಾಯಿಸಿಲು 0821-2533600 ಮತ್ತು 99863 99862 ಸಂಖ್ಯೆ ಸಂಪರ್ಕಿಸಬಹುದು.
ಗುರುವಾರ ಸಂಜೆ 4 ಗಂಟೆಗೆ ಶಿಬಿರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಲಿದ್ದಾರೆ. ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ರಚಿಸಿರುವ ‘ಹಾರ್ಟ್ ಅಟ್ಯಾಕ್’ ಕೃತಿಯನ್ನು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ವಹಿಸಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.