ಮಹದೇಶ್ವರ ಬೆಟ್ಟ: ರಾಜ್ಯದ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ನೆರೆಯ ತಮಿಳುನಾಡಿನ ಮೆಟ್ಟೂರು ಜಲಾಶಯ ಶನಿವಾರ ಭರ್ತಿಯಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ ನವೆಂಬರ್ ಅವಧಿಯಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಜುಲೈನಲ್ಲೇ ತುಂಬಿದೆ. ಜಲಾಶಯದ 16 ಗೇಟ್‌ಗಳಿಂದಲೂ ನೀರು ನದಿಗೆ ಬಿಡಲಾಗುತ್ತಿದೆ.
120 ಅಡಿಗಳಷ್ಟು ಗರಿಷ್ಠ ಮಟ್ಟ ಹೊಂದಿರುವ ಮೆಟ್ಟೂರು ಜಲಾಶಯವು 93.4 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಮೂರು ದಿನಗಳಲ್ಲಿ ಜಲಾಶಯಕ್ಕೆ 15 ಅಡಿಗಳಷ್ಟು ನೀರು ಹರಿದು ಬಂದಿದೆ. ಬುಧವಾರ ಅಣೆಕಟ್ಟೆಯ ನೀರಿನ ಮಟ್ಟ 105.810 ಅಡಿಗಳಷ್ಟಿತ್ತು. ಶನಿವಾರ ಬೆಳಿಗ್ಗೆ ನೀರಿನ ಮಟ್ಟ 120 ಅಡಿ ತಲುಪಿದೆ. ಜಲಾಶಯದ ಒಳಹರಿವು 1.15 ಲಕ್ಷ ಕ್ಯುಸೆಕ್‌ನಷ್ಟಿದೆ. 50 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.