ADVERTISEMENT

ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ 10 ಲಾರಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:23 IST
Last Updated 24 ಜುಲೈ 2021, 16:23 IST
ಮಲೆಮಹದೇಶ್ವರ ವನ್ಯಧಾಮದ ರಸ್ತೆ ಬದಿಯಲ್ಲಿ ಶನಿವಾರ ಸಂಗ್ರಹಿಸಿದ ಕಸದ ರಾಶಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು‌
ಮಲೆಮಹದೇಶ್ವರ ವನ್ಯಧಾಮದ ರಸ್ತೆ ಬದಿಯಲ್ಲಿ ಶನಿವಾರ ಸಂಗ್ರಹಿಸಿದ ಕಸದ ರಾಶಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು‌   

ಹನೂರು: ಮಲೆ ಮಹದೇಶ್ವರ ವನ್ಯಧಾಮದ ವತಿಯಿಂದ ಶನಿವಾರ ಕೌದಳ್ಳಿಯಿಂದ ಮಹದೇಶ್ವರ ಬೆಟ್ಟದವರೆಗಿನ ಮುಖ್ಯ ರಸ್ತೆಯ ಎರಡೂ ಕಡೆಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ತೆರವುಗೊಳಿಸುವ ಕಾರ್ಯಕ್ರಮ ನಡೆಯಿತು.

300ಕ್ಕೂ ಹೆಚ್ಚು ಸ್ವಯಂ ಸೇವಕರು ಇದರಲ್ಲಿ ಭಾಗವಹಿಸಿದ್ದು, 10 ಲಾರಿಗಳಷ್ಟು ಪ್ಲಾಸ್ಟಿಕ್‌ ಕಸ ಸಂಗ್ರಹವಾಗಿದೆ. ಕಳೆದ ಬಾರಿಯೂ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಐದು ಲಾರಿಗಳಷ್ಟು ಕಸ ಸಂಗ್ರಹವಾಗಿತ್ತು.

ಸಂತೆಖಾನೆ ನರ್ಸರಿಯಲ್ಲಿ ಪ್ಲಾಸ್ಟಿಕ್‌ ತೆರವುಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಅರಣ್ಯ ಮತ್ತುವನ್ಯಜೀವಿಗಳುಅಮೂಲ್ಯವಾದವು. ಅವುಗಳಿಗೆವಿಷಕಾರಿಪದಾರ್ಥಗಳನ್ನು ಸೇರಿಸಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ವನ್ಯಜೀವಿಗಳು ತಿಂದರೆ ಸಾಯುತ್ತವೆ. ಭೂಮಿ ಕಲುಷಿತಗೊಳ್ಳುತ್ತದೆ. ಹಾಗಾಗಿ, ಪ್ಲಾಸ್ಟಿಕ್ ವಸ್ತುಗಳನ್ನು ಜನರು ಎಸೆಯಬಾರದು’ ಎಂದರು.

ADVERTISEMENT

ಕೋತಿಗಳಿಗೆಆಹಾರನೀಡುವುದುತಪ್ಪು: ‘ಎಷ್ಟೋ ಜನರು, ಕೋತಿಗಳಿಗೆ ಆಹಾರ ಇಲ್ಲ ಎಂದು ತಮಗಿಷ್ಟ ಬಂದ ಆಹಾರ ಪದಾರ್ಥಗಳನ್ನುಹಾಕುತ್ತಾರೆ.ಇದುತಪ್ಪುಅವುಗಳಿಗೆಉಪ್ಪು,ಖಾರಮಿಶ್ರಿತರಾಸಾಯನಿಕಪದಾರ್ಥಗಳನ್ನುಒಳಗೊಂಡಆಹಾರಗಳನ್ನುಹಾಕುವುದರಿಂದಪ್ರಾಣಕ್ಕೆಆಪತ್ತುಉಂಟಾಗುತ್ತದೆ.ಬಾಳೆಹಣ್ಣುಇನ್ನಿತರೆಪದಾರ್ಥಗಳನ್ನುರಸ್ತೆಯಲ್ಲಿಬಿಸಾಡುವುದರಿಂದಅಪಘಾತಸಂಭವಿಸಿಕೋತಿಗಳುಸತ್ತಿರುವಉದಾಹರಣೆಇವೆ’ ಎಂದರು.

ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದಮೈಸೂರಿನಸ್ವಯಂಸೇವೆಸಂಘಟನೆಯಪದಾಧಿಕಾರಿ ಕೃಷ್ಣಪ್ರಸಾದ್‌ ಅವರು ಮಾತನಾಡಿ, ‘ಧಾರ್ಮಿಕಪುಣ್ಯಕ್ಷೇತ್ರಗಳಿಗೆ ಪಾಪವನ್ನುಕಳೆಯಲುಬರುತ್ತಾರೆಎಂಬಮಾತಿದೆ.ಆದರೆ ಮಹದೇಶ್ವರ ಬೆಟ್ಟದಲ್ಲಿರುವ ಪುಣ್ಯಕ್ಷೇತ್ರಕ್ಕೆಬರುವಭಕ್ತಾಧಿಗಳು ಪ್ಲಾಸ್ಟಿಕ್ಇನ್ನಿತರೆ ತ್ಯಾಜ್ಯಗಳನ್ನುಅರಣ್ಯದಲ್ಲಿಬಿಸಾಡುವಮೂಲಕ ಪಾಪವನ್ನುಮಾಡಿಹೋಗುತ್ತಿದ್ದಾರೆಇಂತಹಕೆಲಸವನ್ನುಇಲ್ಲಿಗೆಬರುವ ಜನತೆಮಾಡಬಾರದು’ ಎಂದರು.

ಎಸಿಎಫ್‌ಗಳಾದಪ್ರಭಾಕರ್,ವನಿತಾ,ಭಾಗ್ಯಲಕ್ಷ್ಮಿ ಆರ್‌ಎಫ್‌ಒಗಳಾದಸುಂದರ್,ನದಾಫ್,ರಾಜೇಶ್‌ಗವಾಲ್, ಪ್ರವೀಣ್‌ಕುಮಾರ್, ನಿಶ್ಚಿತ್ ಸೇರಿದಂತೆ ಅರಣ್ಯಇಲಾಖೆ ಸಿಬ್ಬಂದಿ ಇದ್ದರು.

--

ಪ್ರಕೃತಿ ಸೊಬಗು ಸವಿಯಲು ಬರುವ ಪ್ರವಾಸಿಗರು, ಭಕ್ತರು ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯದ ತಮ್ಮ ಕುರುಹನ್ನು ಬಿಟ್ಟು ಹೋಗದೇ ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು

- ಪೂರ್ಣಶ್ರೀ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.