ADVERTISEMENT

ಗುಂಡ್ಲುಪೇಟೆ: ಪಟ್ಟಲದಮ್ಮನ ರಥ ಎಳೆದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:14 IST
Last Updated 24 ಮಾರ್ಚ್ 2024, 16:14 IST
ಗುಂಡ್ಲುಪೇಟೆ ತಾಲ್ಲೂಕಿನ ರಾಘವಾಪುರದಲ್ಲಿ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಸಂಜೆ ಮಹಿಳೆಯರು ರಥ ಎಳೆದರು
ಗುಂಡ್ಲುಪೇಟೆ ತಾಲ್ಲೂಕಿನ ರಾಘವಾಪುರದಲ್ಲಿ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಸಂಜೆ ಮಹಿಳೆಯರು ರಥ ಎಳೆದರು   

ಗುಂಡ್ಲುಪೇಟೆ: ತಾಲ್ಲೂಕಿನ ರಾಘವಾಪುರದಲ್ಲಿ ಎರಡು ದಿನ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಸಂಜೆ ಮಹಿಳೆಯರೇ ಸ್ವತಃ ರಥ ಎಳೆಯುವ ಮೂಲಕ ಭಕ್ತ ಸಮರ್ಪಿಸಿದರು.

ಜಾತ್ರಾ ಮಹೋತ್ಸವದ ಮೊದಲ ದಿನ ಮಾರ್ಚ್‌ 23ರಂದು ಪುರುಷರು ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿ ಇರಿಸಿ ನಂತರ ರಥದಲ್ಲಿ ಕೂರಿಸಿ ತೇರು ಎಳೆದರು. ಇಂದು ಮಹಿಳೆಯರು ರಥ ಎಳೆಯುವುದು ಇಲ್ಲಿನ ವಾಡಿಕೆಯಾಗಿದ್ದು, ಸಂಪ್ರದಾಯಯದಂತೆ ನೂರಾರು ಮಂದಿ ಮಹಿಳೆಯರು ರಥ ಎಳೆದು ಜಾತ್ರೆಗೆ ಮೆರುಗು ನೀಡಿದರು.

ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಾಲಯವನ್ನು ತಳಿರು, ತೋರಣ ಹಾಗೂ ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎರಡೂ ದಿನ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು.

ADVERTISEMENT

ಬೇಗೂರು, ಗುಂಡ್ಲುಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಹರಕೆ ತೀರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.