ADVERTISEMENT

ಚಾಮರಾಜನಗರ | ಬೆಂಗಳೂರು ಸ್ಫೋಟಕ್ಕೆ ಖಂಡನೆ: ಬಿಜೆಪಿಯಿಂದ ತ್ರಿರಂಗ ಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 4:34 IST
Last Updated 5 ಮಾರ್ಚ್ 2024, 4:34 IST
ಬೆಂಗಳೂರು ಸ್ಪೋಟ ಖಂಡಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಖಂಡರು, ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ತಿರಂಗಾ ಯಾತ್ರೆ ನಡೆಸಿದರು
ಬೆಂಗಳೂರು ಸ್ಪೋಟ ಖಂಡಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಖಂಡರು, ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ತಿರಂಗಾ ಯಾತ್ರೆ ನಡೆಸಿದರು   

ಚಾಮರಾಜನಗರ: ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬಾಂಬ್‌ ಸ್ಫೋಟ ಖಂಡಿಸಿ ಮತ್ತು ರಾಜ್ಯವನ್ನು ಭಯೋತ್ಪಾದನೆಯಿಂದ ರಕ್ಷಣೆ ಮಾಡಿ ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ನಗರದಲ್ಲಿ ಸೋಮವಾರ ತ್ರಿರಂಗ ಯಾತ್ರೆ ನಡೆಯಿತು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ತ್ರಿರಂಗ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸಿತು. 

ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭಯೋತ್ಪಾದನೆ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದಾಗಿ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗುತ್ತಿದೆ. ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವ್ಯಕ್ತಿಯ ರಕ್ಷಣೆಗೆ ಸರ್ಕಾರ ನಿಂತಿದೆ. ಎಫ್‌ಎಸ್ಎಲ್‌ ವರದಿ ಬಂದರೂ ಅದನ್ನು ಬಿಡುಗಡೆ ಮಾಡದೇ ವಿಳಂಬ ಮಾಡುವ ಮೂಲಕ ತಪ್ಪಿಸ್ಥರನ್ನು ರಕ್ಷಣೆ ಮಾಡುವ ಜೊತೆಗೆ ಭಯೋತ್ಪಾದನೆಗೆ ಪರೋಕ್ಷವಾಗಿ ಕುಮ್ಮಕ್ಕು ಹೊರಟಲು ಹೊರಟಿದೆ’ ಎಂದು ಆರೋಪಿಸಿದರು.

ADVERTISEMENT

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವ ಡಾ.ಪರಮೇಶ್ವರ ಅವರು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನು ವ್ಯಾಪಾರ ದೃಷ್ಟಿಯಿಂದ ನಡೆದ ಘಟನೆ ಎಂದಿರುವುದು ಹಾಸ್ಯಾಸ್ಪದ ಹಾಗೂ ಬೇಜವಾಬ್ದಾರಿ ಹೇಳಿಕೆ’ ಎಂದು ಕಿಡಿ ಕಾರಿದರು. 

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ, ಮುಖಂಡರಾದ ಆನಂದ್ ಭಗೀರಥ್, ಯಳಂದೂರು ಅನಿಲ್, ಮಹೇಶ್, ಕಾಡಹಳ್ಳಿ ಮಹೇಶ್, ಎಸ್.ಟಿ.ಮೋರ್ಚಾ ಚಂದ್ರು, ಬೇಡರಪುರ ಬಸವಣ್ಣ, ಶಿವು ವಿರಾಟ್, ಬೂದಂಬಳ್ಳಿ ರಾಜೇಶ್, ಬುಲೆಟ್ ಚಂದ್ರು, ನಗರಸಭಾ ಸದಸ್ಯೆ ಮಮತಾ ಬಾಲಸುಬ್ರಮಣ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಮ್ಮ, ವಿಶಾಲಾಕ್ಷಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.